Tuesday, 20 September 2011

ನಂದು ಒಂದು ಬ್ಯಾಂಕು

ನಂದು ಒಂದು ಬ್ಯಾಂಕು 

ನಾನು ರಾಷ್ಟ್ರಿಕ್ರತ ಬ್ಯಾಂಕ್ ಒಂದರಲ್ಲಿ  ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಾ ಇದ್ದೇನೆ. ಕರ್ತವ್ಯ ಏನು ನಿರ್ವಹಿಸೋದು ಬಂತು, ಹೊಟ್ಟೆ ಪಾಡಿಗಾಗಿ, ಬೇಡೋ ಕೆಲಸ ಮಾಡ್ತಾ ಇದ್ದೀನಿ.


 ಯಾಕೆ ಬೇಡೋ ಕೆಲಸ ಮಾಡ್ತಾ ಇದ್ದೀನಿ ಅಂತ ಹೇಳ್ದೆ ಅಂದ್ರೆ , ಇವತ್ತು ನಮ್ಮ ಬ್ಯಾಂಕ್ನವರ ಕೆಲಸ ಕೂಡ ಒಂದ್ ತಾರಾ ಬೆಡೋದೇ ಆಗಿದೆ. ಒಂದೇ ವ್ಯತ್ಯಾಸ ಅಂದ್ರೆ ನಾವು, ಪ್ರೊಫೆಶನಲ್ ಬಿಕ್ಷುಕರ ತರಹ " ಅಮ್ಮಾ ತಾಯೇ ಬಿಕ್ಷಾ ನೀದಮ್ಮಾ ಅಂತನೋ , ಅಥವಾ ಶಿವಪ್ಪಾ ಕಾಯೋ ತಂದೆ  ಅಂತನೋ ,ಹೇಳಿ ಭಿಕ್ಷೆ ಬೇಡುವುದಿಲ್ಲ . ಅದರ ಬದಲಿಗೆ, ನಾವು ಒಂತರ ಫೈವ್ ಸ್ಟಾರ್ ಸ್ಟೈಲ್ ನಲ್ಲಿ ಭಿಕ್ಷೆ ಬೇಡ್ತೀವಿ.





ನೀವು ಬೆಂಗಳುರಿನಲ್ಲಿ ಎಂ ಜಿ ರಸ್ತೆಯಲ್ಲಿ ಯಾವತ್ತಾದ್ರು ಉತ್ತಮವಾದ ಏ ಸಿ ಕಾರಿನಲ್ಲಿ ಹೋದ್ರೆ, ಸಿಗ್ನಲ್ಲಿನಲ್ಲಿ ನಿಂತು ಕೊಂಡರೆ , ನಿಂತುಕೊಳೋದ್ ಏನ್ ಬಂತು, ನಿಂತ ಕೊಳಲೇ ಬೇಕು, ಆಗ ನಿಮಗೆ ಕೆಲವು ಟೈ , ಕೋಟು ಹಾಕಿ ಹಾಕಿ ಕೊಂದ ಕೆಲವು ವ್ಯಕ್ತಿಗಳೊಂದಿಗೆ ಸಂಪರ್ಕವಾಗುತ್ತದೆ. ಅವರು ಬಹಳ ಸ್ಟೈಲಾಗಿ ಬಂದು ನಿಮ್ಮ ಏ ಸಿ ಕಾರಿನ ಗ್ಲಾಸ್ಸಿಗೆ ಟಕ್ ಟಕ್ ಮಾಡುತ್ತಾರೆ. ನೀವೇನಾದ್ರು ಗ್ಲಾಸ್ಸ್ ಕೆಳಗೆ ಇಳಿಸಿದರೆ , ಕೂಡಲೇ ಅವರ ಬಾಯಿಯಿಂದ ಅತಿ ನಯವಾದ ಮಾತಿನ ಮುತ್ತುಗಳು ನಿಮ್ಮತ್ತ ಉದುರುತ್ತವೆ, " ಎಕ್ಷ್ಕುಸ್ ಮಿ ಸರ್ " ಅಂತ . ನೀವೇನಾದ್ರು ಯಾರೋ ಪಾಪ ದಾರಿ ಗೀರಿ ತಪ್ಪಿದ್ದಾರೆನೋ ಅಂತ , "ಎಸ್ ಪ್ಲೀಸ್ " ಅಂದ್ರೆ ಸಾಕು , ಕೂಡ್ಲೇ ಅವರ ಬಾಯಿಯಿಂದ ಮುಂದಿನ ಮುತ್ತುಗಳು ಉದುರುತ್ತವೆ, " ಸರ್ ಕೆನ್ ಆಯ ಹೇವ್ ಹಂಡ್ರೆಡ್ ರುಪೀಸ್ ಪ್ಲೀಸ್ " . ಇದು ಎಂ ಗಿ ರೋಡಿನ ಫೈವ್ ಸ್ಟಾರ್ ಬಿಕ್ಷುಕರ ಒಂದು ಲೈವ್ ಉದಾಹರಣೆ, ನಾನು ಕಣ್ಣಾರೆ ಕಂಡಿದ್ದು.  ನಮ್ಮ ಪಾಡು ಇದಕ್ಕಿಂತ ತುಂಬಾ ಭಿನ್ನವೆನಾಗಿಲ್ಲ. ಆದರೆ ಇದಕ್ಕಿಂತ ಸ್ವಲ್ಪ ಉನ್ನತ ಶೈಲಿಯಲ್ಲಿ , ಸೆವೆನ್ ಸ್ಟಾರ್  ಶೈಲಿಯಲ್ಲಿ, ಬೇಡುತ್ತೇವೆ.



 ಇವತ್ತು ನಮ್ಮ ಎಲ್ಲ ಪ್ರಾಡಕ್ಟ್ ಗಳನ್ನೂ  ನಾವು ಮಾರುಕಟ್ಟೆಯಲ್ಲಿ ತರಕಾರಿ ಮಾರುವಂತೆ ಮಾರುತ್ತಿದ್ದೇವೆ. ಇಲ್ಲಿ ನಮ್ಮ ಮನೆಯ ಬಳಿ ತರಕಾರಿ , ಹಣ್ಣು ಮಾರುವವನು , ಬೆಳಿಗ್ಗೇನೆ ಕೂಗ್ತಾ ಹೋಗ್ತಾನೆ " ಆಲೂ ಬೆಂಡೆ ಟೊಮೇಟೊ ನೀರುಳ್ಳಿ ಬೀನ್ಸು " . ಅವನ ಕೂಗು ಒಂಥರಾ ನನಗೆ ಅಲಾರಂ ಇದ್ದ ಹಾಗೆ. ನಾವು ಬ್ಯಾಂಕ್ನವರು ಕೂಡ ಒಂಥರಾ ಅವ್ರ ಹಾಗೇನೆ, ಒಂದೇ ವ್ಯತ್ಯಾಸ ಅಂದ್ರೆ , ನಾವು ಅವ್ರ ಹಾಗೆ ಬೆಳಿಗ್ಗೆ ಹೋಗೋದಿಲ್ಲ , ಯಾಕೆ ಅಂದ್ರೆ ನಮಗೆ ಬೆಳಿಗ್ಗೆ ಅಷ್ಟು ಬೇಗ  ಏಳೋದೇ ಗೊತ್ತಿಲ್ಲಾ , ರಾತ್ರಿ ಟೈಟ್ ಆಗಿ ಮಲ್ಕೊಂಡ್ಮೇಲೆ , ಅಷ್ಟು ಬೇಗ ಏಳೋದು ಹ್ಯಾಗೆ. ಹಾಗೇನೆ ಅವ್ರ ಹಾಗೆ ನಮ್ಮ ಪ್ರಾಡಕ್ಟ್ ಹೆಸರು ಹೇಳ್ಕೊಂಡು ಕುಗ್ಲಿಕ್ಕು ನಮಗೆ ಬರೋದಿಲ್ಲ. ಹಾಗಾಗಿ ನಾವೊಂತರ ಸೆವೆನ್ ಸ್ಟಾರ್ ಸೇಲ್ಸ್ ಮ್ಯಾನ್ ಗಳು ಹಾಗು ಬೇಡುವವರು




. ರೋಡ ಷೋ ಹೆಸರಿನಲ್ಲಿ ಇವತ್ತು ಕಂಡ ಕಂಡ ರಸ್ತೆಗಳಲ್ಲಿ , ಉನಿಫಾರ್ಮ್ ಹಾಕಿಕೊಂಡು , ಒಂದು ಬ್ಯಾಂಕಿನ ಹೆಸರು ಇರೋ ಕೊಡೆ ಹಾಕ್ಕೊಂಡು , ರಸ್ತೆಯಲ್ಲಿ ಬರೋ ಹೊಗೊರಿಗೆಲ್ಲ , ನಿಲ್ಲಿಸಕೊಂಡು ಬೇಡ್ತಾ ಇರ್ತಿವಿ. ಇದನ್ ನೋಡ್ಕೊಂಡು ನನ್ನ ಕೆಲವು ಸ್ನೇಹಿತರು ಹೇಳ್ತಾ ಇರ್ತಾರೆ, "ಅಯ್ಯೋ ಪಾಪ". ಕೆಲವರಂತೂ ನಾವು "ಎಕ್ಸುಸ್ ಮಿ ಸಾರ್ " ಅಂತ ಹೇಳ್ದಾಗ, ತಿರಸ್ಕಾರದಿಂದ ನಮ್ಮ ಕಡೆ ಒಂಥರಾ ಬಿಕ್ಷುಕರನ್ನು ನೋಡಿದ ಹಾಗೆ ನೋಡಿದಾಗ , ಯಾಕಾದ್ರೂ ಬ್ಯಾಂಕ್ ಸೇರಿದ್ನೋ, ಸೇರಿದ್ರೂ ಕೊಡ ಇನ್ನು ತನಕ ಯಾಕಾದ್ರೂ ಬ್ಯಾಂಕ್ನಲ್ಲೆ ಇದ್ದೀನಿ ಅಂತ ಅನ್ಸುತ್ತೆ. ನನ್ನ ಬಗ್ಗೆ ನನಗೆ ಜಿಗುಪ್ಸೆ ಬರುತ್ತೆ. ಆದ್ರೆ ಏನು ಮಾಡೋದು, ಕೆಲಸ ಬಿಟ್ರೆ, ಹೆಂಡ್ತಿನು ಕೇಳಲ್ಲ, ಹೇಳ್ತಾಳೆ, " ಕೆಲಸ ಬಿಡಬೇಡಿ, ಕೆಲಸ ಬಿಟ್ರೆ ಇಲ್ಲಿ ಮನೆಯಲ್ಲಿ ಇದ್ದವರಿಗೆಲ್ಲ ತೊಂದ್ರೆ ಕೊಡ್ತಾ ಇರ್ತೀರಾ, ನೀವ್ ಬ್ಯಾಂಕಲ್ಲಾದ್ರು ಇರಿ, ರೋಡಲ್ಲಾದ್ರು ಇರಿ, ಆದ್ರೆ ಕೆಲಸ ಬಿಟ್ಟು ಮನೆಯಲ್ಲಿ ಮಾತ್ರ ಇರಬೇಡಿ" ಆಯ್ತಲ್ಲ, ಹೋಗಲೇ ಬೇಕು.




ಆದ್ರೆ ಈ ರೀತಿಯ ಕೆಲಸ ಗಳಲ್ಲಿ ಎಲ್ಲರಿಗೂ ಬೇಸರ ಇರಬೇಕು ಅಂತ ಏನು ಇಲ್ಲ. ನನ್ನ ಸ್ನೇಹಿತ ಇದ್ದಾನೆ. ಅವನಿಗೆ ಬಹಳ ಖುಷಿ, ಹೊರಗಡೆ ರೋಡ ಷೋಗೆ ಹೋಗೋದು ಅಂದ್ರೆ, ಯಾಕೋ ಅಂತ ಕೇಳಿದ್ರೆ, ಯಾರು ಮಾರಾಯ ಅ ಬ್ಯಾಂಕಿನ ಒಳಗೆ ಗ್ರಾಹಕರ ಬಯ್ಯುಗಳನ್ನು ಕೇಳೋದು, ಆ ಕಂತ್ರಿ ಮಾನೆಜರಿನ ಪುರಾಣ ಕೇಳುವುದು, ಅದರ ಬದಲಿಗೆ ಇಲ್ಲಿ ಓಡಾಡೋದು ಸುಲಭ. ಇಂಥವರು ಕೂಡ ಇರ್ತಾರೆ.








                                                     ( ಮೆನೆಜರಿಗೆ ಒದೆಯಲು ಸ್ಪರ್ಧೆ )
ಇನ್ನು ಮ್ಯನಜೆರ್ ಆದರಂತೂ ಮುಗಿಯಿತು. ಅವ್ರು ಒಂಥರಾ ಫೂಟ್ ಬಾಲ್ ಇದ್ದಂತೆ. ಒಂದು ಕಡೆಯಿಂದ ಹೆಡ್ಆಫೀಸ್ ನವರು ಓದೀತ ಇದ್ರೆ, ಮತ್ತೊಂದು ಕಡೆಯಿಂದ ಜೋನಲ್ ಆಫೀಸ್ನವರು ಓದೀತ ಇರ್ತಾರೆ. ಅಷ್ಟಕ್ಕೆ ಸಾಲದು ಅಂತ ಸ್ಟಾಫ್ ನವರು ಕೂಡ ನಾವೇನು ಕಡಮೆ ಅಂತ್ಹೇಳಿ ತಮ್ಮದು ಎರಡು ಒದೆ ಓದಿತಾರೆ. ಇನ್ನೇನು ಸುಧಾರ್ಸ್ಕೊತಿನಿ ಅಂತ ಅಂದ್ಕೊಳ್ತಿರುವಾಗಲೇ  ಕಸ್ಟಮರ್ ಓಡೋಡಿ ಬರ್ತಾನೆ, ಅಯ್ಯೋ ಸ್ವಾಮಿ ಸ್ವಲ್ಪ ತಡೀರಿ, ನಾನಿನ್ನು ಓದ್ದೆ ಇಲ್ಲ, ಅಂತ್ಹೇಳಿ ಅವನದು ಎರಡು ಒದೆ ಒದ್ದು ಹೋಗ್ತಾನೆ.  ಇಷ್ಟೆಲ್ಲಾ ಅದ್ರು, ನೀವು ಸಿಟ್ಟು ಮಾಡ್ಕೊಳ್ಳೋ ಹಾಗಿಲ್ಲ, ಆ ಹಕ್ಕನ್ನು ನಿಮಗೆ ಬ್ಯಾಂಕ್ನವರು ನಿಮಗೆ ಇನ್ನು ಕೊಟ್ಟಿಲ್ಲ. ಅಷ್ಟೆಲ್ಲ ಓಡಿಸ್ಕೊಳ್ತಾ ಇರುವಾಗಲೂ ಕೂಡ ನೀವು ನಗ್ ನಗ್ತಾ ಇರಬೇಕು. ಮನ್ಸ್ಒಳಗೆ ಎಷ್ಟು ಬೇಕಾದ್ರೂ ಬಯ್ಕೋಬಹುದು. ಆದ್ರೆ ಬೇರೆ ಯವರಿಗೆ ಕೇಳ್ಸೋ ಹಾಗೆ ಬಯುವಂತಿಲ್ಲ . ಇಂಥ ಸಮಯದಲ್ಲಿ ನೀವು ಮುನ್ನಾ ಭಾಯಿ ಎಂ ಬಿ ಬಿ ಎಸ್ ನಲ್ಲಿರುವ ಬೊಮ್ಮನ್ ಇರಾನಿಯನ್ನು ಜ್ಞಾಪಕ ಮಾಡಿಕೊಳ್ಳಿ, ಕಷ್ಟ ಬಂದಾಗಲೆಲ್ಲ ಜೋರಾಗಿ ನಗುವುದು, ಚೆನ್ನಾಗಿ ಅಭ್ಯಾಸ ಮಾಡಿಕೊಳ್ಳಿ.


                                                        ( ಮೆನೆಜರಿಗೆ ಒದ್ದಿದ್ದಕ್ಕಾಗಿ ಸಂಭ್ರಮ ಪಡುತ್ತಿದ್ದಾರೆ )


                                                  ( ಮೆನೆಜರಿಗೆ ಒದೆಯಲು ಸಿದ್ದರಾಗಿರುವ ಫುಟ್ಬಾಲ್ ಟೀಮ್ )

                                                     ( ಮೆನೆಜರನ್ನು ಒದೆಯಲು ಸ್ಪರ್ಧೆ )
ಇಷ್ಟೆಲ್ಲದರ ಮಧ್ಯೆ ನೀವು ವ್ಯವಹಾರಗಳನ್ನೂ ಮಾಡಬೇಕು, ನಿಮಗೆ ಕೊಟ್ಟ ವ್ಯವಹಾರದ ಗುರಿಗಳನ್ನು ಕೂಡ ಮುಟ್ಟಬೇಕು. ಇಲ್ಲಿ ಬೇಕಾಗುತ್ತದೆ ನಿಮಗೆ ಎಂ ಗಿ ರೋಡಿನ ಆ ಭಿಕ್ಷುಕನ ನೆನಪು ಹಾಗು ಕಲೆ. ತುಂಬಾ ನಯವಾಗಿ , ವಿನಯವಾಗಿ, ಬಂದವರಿಗೆ ಪಾನೀಯ , ಉಡುಗೊರೆಗಳನ್ನು  ನೀಡಿ, ನಂತರ ನೀವು ಭಿಕ್ಷೆ ಬೇಡಬೇಕಾಗುತ್ತದೆ. ಒಮ್ಮೆಲೇ ನೀವು ಬೇಡುವಂತಿಲ್ಲ. ಹಾಗೇನಾದರು ಬೇಡಿದಲ್ಲಿ, ಮತ್ತೆ ನಿಮಗೆ ತಿರಸ್ಕಾರದ ನೋಟ ಮಾತ್ರ ಲಭ್ಯ. ಸರಕಾರ ಭಿಕ್ಷಾಟನೆಯ ಮುಲೋಚಾಟನೆ ಮಾಡ ಬೇಕು ಅಂತ ಯೋಜನೆಗಳನ್ನು ಹಾಕಿದಾಗ ಅವರಿಂದ ಬಚಾವಾಗಿ ನೀವು ಭಿಕ್ಷಾಟನೆ ಮಾಡ ಬೇಕು. ಹಾಗಾಗಿ ನೀವು ಭಿಕ್ಷೆ ಬೆಡ್ತಾ ಇದ್ದೀರಿ ಅಂತ ಯಾರಿಗೂ ಗೊತ್ತಾಗಬಾರದು.





 ಹಾಗಾಗಿಯೇ ಬ್ಯಾಂಕಿನಲ್ಲಿ ಮ್ಯನಜರುಗಳಿಗೆ ಪ್ರತ್ಯೇಕ ಬಂದ್ ಮಾಡುವಂತಹ "ಕ್ಯಾಬಿನ್" ಎಂಬ ಹೆಸರಿನ ರೂಮನ್ನು ಕೊಡುವುದು,  ಅವರ ಭಿಕ್ಷಾಟನೆ ಯಾರಿಗೂ ಗೊತ್ತಾಗ ಬಾರದು ಅಂತ. ಯಾರಿಗೆ ಗೊತ್ತಿತ್ತು , ಒಂದು ಕಾಲದಲ್ಲಿ ವೈಟ್ ಕಲರ್ ಜಾಬ್ ಅನಿಸಿ ಕೊಂಡ ಈ ಕೆಲಸ ಇವತ್ತು ಟೈಟ್ ಟೆರರ  ಜಾಬ್ ಆಗುತ್ತೆ  ಅಂತ. ಇಷ್ಟೆಲ್ಲಾ ಸತ್ಕಾರ ಅದ್ಮೇಲು ಕೂಡ ಬಂದವನು ನಿಮಗೆ ಭಿಕ್ಷೆ ಕೊಡ್ತಾನೆ ಅಂತ ಏನು ಗಾರಂಟೀ ಇಲ್ಲ. ಹಾಗಾಗಿ ನೀವು ಬಂದವನ ಮೂಡನ್ನು ಮೊದಲೇ ಗ್ರಹಿಸುವಂತಹ ಕಲೆಯನ್ನು ನಿಮ್ಮೊಳಗೆ ಮೆಳಯ್ಸಿಕೊಂಡಿರಬೇಕು , ಯಾಕೆ ಅಂದ್ರೆ ಅವ್ರು ಬಂದಾಗ ಅವರಿಂದ ಏನೂ ಲಾಭ ಇಲ್ಲ ಅಂತ ಅನುಮಾನ ಬಂದ್ರೆ, ಪಾನೀಯ ಹೇಳುವಾಗ, ಗುಜರಾತಿನ ಮಾರವಾಡಿಗಳ ನೆನಪು ಬರಬೇಕು. ಬ್ಯಾಂಕಿನ ಚಪರಾಸಿಯ ಹತ್ತಿರ ಪಾನಿಯಕ್ಕೆ ಹೇಳುವಾಗ, ಹೇಳಿದಂತಿರಬೇಕು, ಆದರೆ ಒಂದು ಘಂಟೆ ಕಳೆದರು ಪಾನೀಯ ಬರಬಾರದು, ಬಂದ ಗ್ರಾಹಕ ಬೇಜಾರಾಗಿ ಎದ್ದು ಹೋಗ ಬೇಕು. ಆಗ ನೀವು ಬೇಕಾದರೆ ಗ್ರಾಹಕನ ಎದುರು ಚಪರಾಸಿಗೆ ಬಯಿರಿ, ಆದರೆ ಒಂದು ಜಾಗ್ರತೆ ನೋಡಿಕೊಳ್ಳಿ, ಆ ಸಮಯದಲ್ಲಿ, ಚಪರಾಸಿ ಮಾತ್ರ ಅಲ್ಲಿಗೆ ಬರಬಾರದು, ಇಲ್ಲ ಅಂದ್ರೆ ಅವ್ನು ನಿಮ್ಮ ಆರತಿ ಎತ್ತಿ ಬಿಡ್ತಾನೆ.






ಇಷ್ಟೆಲ್ಲಾ ಕಷ್ಟ ಪಟ್ಟ ಮೇಲೆ, ಅಕಸ್ಮಾತ್ ಬಂದ ಗ್ರಾಹಕ ನಿಮಗೆ ಏನಾದ್ರು ಭಿಕ್ಷೆ ಕೊಟ್ ಬಿಟ್ಟ ಅಂತ ಮಾಡಿ, ಅಗ್ಲಾದ್ರು ಸುಖ ಇದ್ದೀಯ?  ಖಂಡಿತ ಇಲ್ಲ,  ಆಗ ನೀವು ಇನ್ನೊಂದು ಕಡೆ ಹೋಗ್ಬೇಕು , ಬೇಡ್ಲಿಕ್ಕೆ.  ಈಗ ನೀವ್ ಹೋಗ್ಬೇಕು, ಗುಮಾಸ್ತ ಎಂಬ ನರ ಹಂತಕನ ಬಳಿ. ಅವ್ರು ನಿಮ್ಮನ್ನು ಬರೀ ಕಣ್ಣಿನಲ್ಲೇ ನುಂಗಿ ಹಾಕಿ ಬಿಡ್ತಾರೆ.  ಪುನಃ ಇವರತ್ರ ಬೇಡ ಬೇಕು. ಇಲ್ಲಿ ಮತ್ತೆ ನಿಮ್ಮ ತಾಳ್ಮೆಯನ್ನು ಒರೆ ಹಚಲಾಗುತ್ತದೆ. ಅದರಲ್ಲಿ ನೀವು ಪಾಸ್ ಆದ್ರೆ ಮಾತ್ರ ನಿಮ್ಮ ಭಿಕ್ಷೆ ಎಂಬ ವ್ಯವಹಾರ ಕುದುರುತ್ತದೆ. 

ಇಷ್ಟೆಲ್ಲಾ ಅದ್ಮೆಲಾದ್ರು ಖುಷಿ ಇದೆಯಾ , ಖಂಡಿತ ಇಲ್ಲ. ಸಾಲ ಕೊಡ್ಲಿಕ್ಕೊಸ್ಕರ ಕೂಡ ಇವತ್ತು ಗ್ರಾಹಕರ ಮನೆ ಬಾಗಿಲಿಗೆ ಹೋಗ ಬೇಕು. ಅವನ ನೂರಾರು ಪ್ರಶ್ನೆಗಳಿಗೆ , ಕೋರ್ಟಿನ ಕಟಕಟೆಯಲ್ಲಿ ನಿಂತು ಜವಾಬು ನೀಡಿದಂತೆ , ಉತ್ತರ ನೀಡ ಬೇಕು. ಹೋಗ್ಲಿ ಸಾಲ ಕೊಟ್ರೆ ಅಷ್ಟೇ ಮುಗೀತಾ, ಇಲ್ಲ , ಖಂಡಿತ ಇಲ್ಲ. ಅಲ್ಲಿಂದ ನಿಮ್ಮ ಚಕ್ರವ್ಯುಹವೆಂಬ ಸಮಸ್ಯೆಗಳ ಸುಳಿ ಪ್ರಾರಂಭವಾಗುತ್ತದೆ. ಆ ಗ್ರಾಹಕನಿಗೆ ಹುಶಾರಿಲ್ಲವೆಂದರೆ ನಿಮಗೆ ಚಳಿ ಜ್ವರ ಬರುತ್ತದೆ. ಅವನಿಗೆ ಬಿಸಿನೆಸ್ಸಿನಲ್ಲಿ ನಷ್ಟವಾದರೆ ನಿಮಗೆ ತಲೆ ನೋವು ಪ್ರಾರಂಭವಾಗುತ್ತದೆ. ಅವನು ಒಂದು ತಿಂಗಳ ಕಂತು ಕತ್ತಲಿಲ್ಲವೆಂದರೆ ನಿಮಗೆ ರಾತ್ರಿ ಇಡೀ ನಿದ್ದೆ ಬರುವುದಿಲ್ಲ. ಒಟ್ಟಿಗೆ ಸಾಲ ಕೊಟ್ಟ ನಂತರ ನಿಮ್ಮ ಸಮಸ್ಯೆಗಳು ನೂರ್ಪಾಲು ಹೆಚ್ಹಾಗಿ , ನೀವು ಹುಚ್ಹಾಗಿ, ಯಾವಾಗಲು ಪೆಚ್ಹಾಗಿ, ದಾರಿ ಕನದಂತಾಗಿ ರಾತ್ರಿಯೆಲ್ಲ ಕನಸ್ಸಿನಲ್ಲಿ , "ವಿಜಿಲೆನ್ಸ್ " ಎಂಬ ಭೂತದ ಕಾಟ ಹೆಚ್ಹಾಗಿ , ರಕ್ತದೊತ್ತಡ , ಸಕ್ಕರೆ ಖಾಯಿಲೆ ಮುಂತಾದ ಸಂಗಾತಿಗಳ ಒಡನಾಡಿಯಾಗಿ , ಜೀವನವೇ ಬೇಸರವೆನಿಸುತ್ತದೆ. ಈ ರೀತಿ ರಾತ್ರಿ ೨ , ೩ ಘಂಟೆಯ ಹೊತ್ತಿಗೆ ನಿಮಗೆ ಪಶಾತ್ತಪವಗುತ್ತದೆ, ಅಯ್ಯೋ ನಾನು ಯಾಕೆ ಮ್ಯಾನೇಜರ್ ಪದವಿಯನ್ನು ತೆಗೆದುಕೊಂಡೆ ಎಂದು. ನಿಮ್ಮ ಸಹೋದ್ಯೋಗಿಯಿನ್ನು  ಗುಮಾಸ್ತನಾಗಿ , ಎಲ್ಲರನ್ನು ಫುಟ್ಬಾಲ್ನಂತೆ ಒದೆಯುತ್ತ , ಸುಖವಾದ ನಿದ್ದೆಯೊಂದಿಗೆ ತನ್ನ ಜೀವನ ಸವೆಸುವುದನ್ನು ನೋಡಿದಾಗಲಂತೂ , ನಿಮ್ಮ ಮೂರ್ಖತನದ ಬಗ್ಗೆ ನಿಮಗೆ ಖಾತರಿಯಾಗುತ್ತದೆ. 



ಈಗಲಾದರೂ ಅರಿವಾಯ್ತಾ, ಯಾಕೆ ನಾನು ಅವಾಗಾವಾಗ ಹುಚನಂತೆ ಆಡ್ತಾ ಇರ್ತೇನೆ ಅಂತ? ಈಗ ಅರ್ಥ ಆಯ್ತಾ ನನ್ನ ತಲೆ ಮೇಲೆ ಒಂದು ಕೂಡ ಕೂದಲು ಯಾಕೆ ಇಲ್ಲ ಅಂತ ?



ಹುಷಾರಾಗಿರಿ, ನಿಮ್ಮ ಮೇಲಿನ ಅಧಿಕಾರಿಗಳು, ನಾನಾ ರೀತಿಯ ಬಕರಾಗಳನ್ನು , ಹುಡುಕುತ್ತ ಇರ್ತಾರೆ, ಎಚ್ಹರಿಕೆ , ಅಪ್ಪಿ ತಪ್ಪಿಯೂ ಅವರ ಮುಂದೆ ಕನಿಸಿಕೊಳ್ಳಬೇಡಿ, ಇಲ್ಲವಾದರೆ, ಕೂಡಲೇ, ಬಲಿ ಕೊಡುವ ಮುನ್ನ ಕುರಿಗೆ ಹಾರ ತುರಾಯಿ ಹಾಕಿ, ಬ್ಯಾಂಡು ಬಜಾ ಬಜಂತ್ರಿಗಳೊಂದಿಗೆ ಸನ್ಮಾನ ಮಾಡಿದಂತೆ , ನಿಮಗೂ ಕೂಡ ಮಾಡುತ್ತಾರೆ . 

ಹೋಶಿಯಾರ್ ,  ಜಾಗತೇ ರಹೋ ,   ಜಾಗತೇ ರಹೋ . 


No comments:

Post a Comment