ತೊಂಬತ್ತು ವಸಂತಗಳನ್ನು ಕಳೆದರೂ, ಇನ್ನೂ, ನಮ್ಮನ್ನೂ , ನಾಚಿಸುವಂತಹ , ಲವಲವಿಕೆ, ಚಟುವಟಿಕೆಗಳನ್ನು ಹೊಂದಿರುವ, ಚಿರಂತನ ಯುವಕ ಆಗಿರುವ ನನ್ನ ಪಿತ್ರೋಶ್ರೀ ಶ್ರೀ ಗೋವಿಂದ ರಾಯ ಮಲ್ಲ್ಯ . ಬಾಲ್ಯದಿಂದಲೂ ಕಷ್ಟ ಕಾರ್ಪಣ್ಯಗಳಲ್ಲೇ ಜೀವನ ಸವೆಸಿರುವ ನನ್ನ ಗೌರವಾನ್ವಿತ ತಂದೆ. ಎಷ್ಟೇ ಕಷ್ಟ ಬಂದರು ಯಾರಿಗೂ ತೋರ್ಪಡಿಸದೆ , ಯಾವಾಗಲು ನಗುತ್ತ ಇರುವ, ಯಾವಾಗಲು ಬೇರೆಯವರ ಹಿತಕ್ಕಾಗಿ ಮರುಗುವ , ನಿಸ್ವಾರ್ಥ ವ್ಯಕ್ತಿ ನನ್ನ ತಂದೆ.
ಅವರ ಜೀವನದುದ್ದಕ್ಕೂ ಅವರು ಗಳಿಸಿದ ಆಸ್ತಿ ಎಂದರೆ ಕೇವಲ ಅವರ ಒಳ್ಳೆಯತನ , ಹಾಗು ಇತರರ ಪ್ರೀತಿ ವಿಸ್ವಾಸ. ಹಣಕ್ಕೆ ಎಂದು ಪ್ರಾಮುಖ್ಯತೆ ಕೊಡದ, ಕೇವಲ ಪ್ರೀತಿ ವಿಸ್ವಾಸಕ್ಕೆ ಬೆಲೆ ಕೊಟ್ಟ ಆದರ್ಶ ವ್ಯಕ್ತಿ.
ಅವರನ್ನು ತಂದೆಯಾಗಿ ಪಡೆದ ನಾನು ಧನ್ಯ.

No comments:
Post a Comment