Monday, 19 September 2011

ನಾನು ಮತ್ತು ಪ್ರಕ್ರತಿ


ನಾನು ಮತ್ತು ಪ್ರಕ್ರತಿ 

೧೯೬೪ ನಾನು ೩ನೆ ತರಗತಿಯಲ್ಲಿರುವಾಗ , ಒಂದು ದಿನ ಸಂಜೆ ಸುಮಾರು ೭ ಘಂಟೆಯ ಹೊತ್ತಿಗೆ , ಜೋರಾಗಿ ಮಳೆ ಬಂತು. ಆಗ ನಾನು ಶಿವಮೊಗ್ಗದ ಎಚ್ ಪಿ ಸಿ ಸಿನಿಮಾದ ಬಳಿ ಒಂದು ಮರದ ಕೆಳಗೆ ನಿಂತು ಕೊಂಡಿದ್ದೆ. ಆಗೆಲ್ಲ ಬಸ್ ಸ್ಟಾಪ್ ಇರ್ಲಿಲ್ಲ, ಅಥವಾ ಯಾವುದೇ ದೊಡ್ಡ ಬಿಲ್ಡಿಂಗ್ ಇರ್ಲಿಲ್ಲ. ಹಾಗಾಗಿ ಮಳೆಯಿಂದ ಬಚಾವ್ ಆಗಲಿಕ್ಕೆ ಒಂದೇ ದಾರಿ ಅಂದ್ರೆ ಮರದ ಕೆಳಗೆ ನಿಂತುಕೊಳ್ಳುವುದು. ಆಗಿನ ಕಾಲದಲ್ಲಿ ಶಿವಮೊಗ್ಗದಲ್ಲಿ ಊರು ತುಂಬಾ ಮರಗಳಿದ್ದವು. ಹಾಗಾಗಿ ನಾನು ಕೂಡ ಇತರೆ ಜನರೊಂದಿಗೆ ಮರದ ಕೆಳಗೆ ನಿಂತುಕೊಂಡಿದ್ದೆ. ಆಗ ಬಂದ ಬಿರುಗಾಳಿ ಮಳೆಗೆ ನಾವು ನಿಂತಿದ್ದ ಮರ ಬುಡ ಸಮೇತ ಕಿತ್ತು ಕೊಂಡು ಬಂದು ಧಾರಾಶಾಯಿಯಾಯಿತು. ನಾವೆಲ್ಲಾ ಮರದ ರೆಂಬೆಗಳ ಕೆಳಗೆ ಸಿಕ್ಕಿ ಕೊಂಡೆವು. ಹೇಗೋ ಕಷ್ಟ ಪಟ್ಟು ಹೊರಗೆ ಬಂದೆವು. ಆದರೆ ಭೀಕರ ಮಳೆ. ಏನು ಮಾಡುವುದು. ಮಳೆಯಲ್ಲಿ ನೆನೆಯುತ್ತ ಮನೆ ಕಡೆ ಹೊರಟೆ. ಆಗ ಎಲೆಕ್ಟ್ರಿಸಿಟಿ/ಸ್ಟ್ರೀಟ್ ಲೈಟ್ ಕೂಡ ಇರ್ತ ಇರಲಿಲ್ಲ. ಹಾಗಾಗಿ ಕತ್ತಲೆಯಲ್ಲೇ , ಹೆದರುತ್ತ ಮನೆ ಕಡೆ ಹೊರಟೆ.  ಆದರೆ ದಾರಿಯುದ್ದಕ್ಕೂ ನಾನು ಯೋಚನೆ ಮಾಡ್ತಾ ಇದ್ದೆ , ಏನಂದ್ರೆ, ನಾನು ದೊಡ್ಡವನಾದ ಮೇಲೆ, ನನ್ ಕಯಲ್ಲಿ ದುಡ್ಡು ಆದ ಮೇಲೆ ಶಿವಮೊಗದಲ್ಲಿ ಇರುವಂತಹ ಎಲ್ಲ ಮರಗಳನ್ನು ಕಡಿಸಿ ಹಾಕಿ ಬಿಡ್ತೀನಿ. ಅದರಿಂದ ಜನರಿಗೆ ಉಪಕಾರ ಆಗುತ್ತೆ, ಈ ರೀತಿ ಮರ ಬಿದ್ದು, ಜನರಿಗೆ ತೊಂದರೆ ಆಗುವುದಿಲ್ಲ. ಕೇವಲ ಶಿವಮೊಗ್ಗದ ಮರಗಳ ಬಗ್ಗೆ ಮಾತ್ರ ಯಾಕೆ ಯೋಚಿಸಿದ್ದೆ ಅಂದ್ರೆ ನಮಗೆ ಶಿವಮೊಗ್ಗ ಬಿಟ್ರೆ ಬೇರೆ ಊರಿನ ಬಗ್ಗೆ ಹೆಚ್ಹು ಗೊತ್ತೇ ಇರ್ಲಿಲ್ಲ.  ಈ ಯೋಚನೆ ನನಗೆ ಬಂದಿದ್ದು ಯಾಕೆ ಅಂದ್ರೆ, ಆಗ ನನ್ನಲ್ಲಿ ಪ್ರಜ್ಞಾವಂತಿಕೆ ಇರಲಿಲ್ಲ. ನನ್ನ ಯೋಚನಾ ಶಕ್ತಿ ಸಣ್ಣದಾಗಿತ್ತು. ಆಗ ನನಗೆ ಮರಗಳ ಬಗ್ಗೆ ಏನು ಗೊತ್ತೇ ಇರಲಿಲ್ಲ. ಈ ಪ್ರಪಂಚದ ಉಳಿವಿಗೆ ಮರಗಳ ಸಹಕಾರದ ಬಗ್ಗೆ ಗೊತ್ತೇ ಇರಲಿಲ್ಲ. ಆದ್ರೆ ಈಗ ಯೋಚನಾ ಶಕ್ತಿ ಇದೆ, ಪ್ರಜ್ಞಾವಂತಿಕೆ ಇದೆ, ಆದರೆ, ಈಗ ಆ ಪ್ರಜ್ಞಾವಂತಿಕೆಯಿಂದ ಮನಸ್ಸಿಗೆ ನೋವಾಗುತ್ತಿದೆ. ಯಾಕೆ ಅಂದ್ರೆ, ಈಗ ವಿಶ್ವದಾದ್ಯಂತ ಎಲ್ಲ ಕಡೆ ಕಾಡು/ಗಿಡ/ಮರಗಳನ್ನು ನಾಶ ಪಡಿಸಲಾಗುತಿದೆ, ಆದರೆ ನಮ್ಮಿಂದ ಏನನ್ನೂ ಮಾಡ್ಲಿಕ್ಕೆ ಆಗ್ತಾ ಇಲ್ಲ. 

ಈ ಜಗತ್ತನ್ನು ಸ್ರಷ್ಟಿ ಮಾಡಿದ್ದು ಯಾರು ಅನ್ನುವುದರ ಬಗ್ಗೆ ಬಹಳ ಜಿಜ್ಞಾಸೆ ಇದೆ. ಹಲವು ರೀತಿಯ ವಿಚಾರಗಳಿವೆ. ಕೆಲವರು ಹೇಳುತಾರೆ ವಿಶ್ವದ ಸೃಷ್ಟಿ ಬಿಗ್ ಬಾಂಗ್ನಿಂದಾಗಿ ಆಯಿತು ಅಂತ. ಇನ್ನು ಕೆಲವರು ಹೇಳ್ತಾರೆ, ವಿಶ್ವ ಶೂನ್ಯದಿಂದ ಆಗಿದೆ ಅಂತ. ಇನ್ನು ಕೆಲವರು ಹೇಳ್ತಾರೆ, ಇದು ದೇವರ ಸೃಷ್ಟಿ ಅಂತ. ಆದರೆ ಒಂದಂತು ನಿಜ, ಜಗತ್ತು ಸೃಷ್ಟಿಯಾಗಿದೆ. ಅನೇಕ ರೀತಿಯ ಜೀವ ಜಂತುಗಳು ಇದರಲ್ಲಿ ವಾಸ ಮಾಡಿ ಕೊಂಡಿವೆ.  ಇಲ್ಲಿ ವಾಸ ಮಾಡ್ಲಿಕ್ಕೆ ಎಲ್ಲರಿಗೂ ಹಕ್ಕು ಉಂಟು. ಅದು ಕೂಡ ಸಮಾನ ಹಕ್ಕು. ಮತ್ತೊಂದು ವಿಷಯ ಅಂದ್ರೆ, ಈ ಪ್ರಕ್ರತಿ ಕೂಡ ಎಲ್ಲ ರೀತಿಯ ಜೀವ ಜಂತುಗಳನ್ನು ಒಬ್ಬರಿಗೆ ಒಬ್ಬರು ಅನುಕೂಲವಾಗುವಂತೆ ವ್ಯವಸ್ಥೆ ಮಾಡಿದೆ. 













ಅದಕ್ಕೆ ಆಗಿನೆ ನಮ್ಮವರು ಬಹಳ ಹಿಂದೆ ಶ್ಲೋಕದಲ್ಲಿ ಹೇಳಿದ್ರು, ಅದು ಅಂದ್ರೆ, ಯೋಜಕಸ್ತತ್ರ ದುರ್ಲಭ ಅಂತ. ಈ ಪ್ರಪಂಚದಲ್ಲಿ ಯಾವುದೇ ವಸ್ತು, ಮೂಲಿಕೆಗಳು, ಗಿಡ ಮರಗಳು , ಜೀವ ಜಂತುಗಳು, ಮನುಷ್ಯನನ್ನು ಸೇರಿಸಿ, ಅಪ್ರಯೋಜಕ ಅಂತ ಇಲ್ಲ. ಪ್ರತಿಯೊಂದು ಕೂಡ ಉಪಯೋಗಕ್ಕೆ ಬರುತ್ತದೆ. ಆದರೆ ಅದು ಎಲ್ಲಿ, ಯಾವಾಗ, ಯಾರಿಗೆ ಉಪಯೋಗಕ್ಕೆ ಬರುತ್ತದೆ ಅಂತ ತಿಳಿದವರು ಮಾತ್ರ ಕಡಿಮೆ. ಪ್ರಪಂಚದಲ್ಲಿರುವ   ಇತರೆ ಎಲ್ಲಾ ಜೀವ ಜಂತುಗಳು ಬೇರೆ ಜೀವಿಗಳಿಗೆ ಪೂರಕವಾಗಿ ಬದುಕುತ್ಹವೇ . ಆದರೆ ಮನುಷ್ಯ ಮಾತ್ರ ಪ್ರಪಂಚದಲ್ಲಿ ಇರುವುದೆಲ್ಲ ತನಗಾಗಿ ಮಾತ್ರ ಅಂತ ತಿಳಿದು 
 ಕೊಂಡಿದ್ದಾನೆ. ಆದರೆ ಆ ಸೃಷ್ಟಿ ಕರ್ತ ಮಾತ್ರ ಇಲ್ಲಿ ಎಲ್ಲರಿಗೂ ಅನುಕೂಲವಾಗುವಂತೆ ,            ಒಂದಕ್ಕೆ ಒಂದು ಪೂರಕವಾದ   ಜೀವ    ಜಂತು, ಗಿಡ ಮರಗಳನ್ನು ಸೃಷ್ಟಿಸಿದ. ಇಲ್ಲಿ ಇರುವ ಪ್ರತಿಯೊಂದು ವಸ್ತು, ಜೀವ , ಎಲ್ಲವೂ ಕೂಡ ಜೀವಿಸಲಿಕ್ಕಾಗಿ ಮತ್ತೊಂದು          ಜೀವವನ್ನು ಅವಲಂಬಿಸುತ್ತದೆ. ಪ್ರತಿಯೊಂದು ಜೀವಿಗೂ ಕೂಡ ಜೀವಿಸಲಿಕ್ಕಾಗಿ ಇಂಧನದ ಅವಶ್ಯಕತೆ ಇದೆ, ಅದನ್ನು ನಾವು ಆಹಾರ ಎಂದು ಕರೆಯುತ್ಹೇವೆ. ಹುಲಿಗೆ ಹಸುವು ಆಹಾರವಾದರೆ, ಹಸುವಿಗೆ ಗಿಡ ಮರಗಳು ಆಹಾರ. ಗಿಡ ಮರಗಳಿಗೆ ಗೊಬ್ಬರ ಆಹಾರ . ಮನುಷ್ಯನಿಗೆ ತರಕಾರಿ , ಎಲೆ, ಸೊಪ್ಪು, ಮೀನು, ಇತ್ಯಾದಿಗಳು ಆಹಾರವದರೆ, ಅದೇ ತರಕಾರಿ ಬೆಳೆಯುವ ಗಿಡ, ಬಳ್ಳಿಗಳಿಗೆ ಗೊಬ್ಬರ ಆಹಾರ . 


ಮೀನಿಗೂ ಕೂಡ ಗೊಬ್ಬರವೆ ಆಹಾರ. ಹಾಗಾದರೆ ಈ ಗೊಬ್ಬರ ಎಲ್ಲಿಂದ ಬರುತದೆ. ಮನುಷ್ಯನ ಮಲವೇ ನಿಜವಾಗಿಯೂ ಅತ್ಯುತ್ತಮ ಗೊಬ್ಬರ. ಅದರಷ್ಟು ಉತ್ತಮ ಗೊಬ್ಬರ ಇನೊಂದಿಲ್ಲ. ಹಾಗೆಯೇ, ಸೊಪ್ಪನ್ನು ತಿನ್ನುವ ಪ್ರಾಣಿಗಳ ಮಲವೇ ಮತ್ತೊಂದು ಅತ್ಯುತ್ತಮ ಗೊಬ್ಬರ. ಹೀಗೆ ದೇವರು ಒಬ್ಬರ ತ್ಯಾಜ್ಯವನ್ನು ಮತ್ತೊಬ್ಬರ ಆಹಾರವನ್ನಾಗಿ ಮಾಡಿದ. ಇದೆ ಒಂದು ರೀತಿಯ ಚಕ್ರವಿದ್ದಂತೆ. ಒಬ್ಬರ ಮಲ ಇನ್ನೊಬ್ಬರ ಹಾರವಾದಾಗ, ಸಹಜವಾಗಿಯೇ ಎಲ್ಲಿಯೂ ಆಹಾರ ಅರ್ಥಾತ್ ಇಂಧನದ ಕೊರತೆ ಬರುವುದಿಲ್ಲ. ಆದರೆ ಮನುಷ್ಯ ಮಾತ್ರ ಈ ಜಗತ್ತು ಇರುವುದು ತನಗಾಗಿ ಮಾತ್ರ ಅಂತ ತಿಳ್ಕೊಂಡ್ ಬಿಟ್ಟಿದ್ದಾನೆ. ಇಲ್ಲಿ ಇರುವ ಸರ್ವಸ್ವವೂ ತನಗಾಗಿಯೇ ಇರುವುದೇ ಅಂತ ತಿಳ್ಕೊಂಡ್ ಬಿಟ್ಟಿದ್ದಾನೆ. ತನ್ನ ಭೋಗ ಸಾಧನೆಗಾಗಿ ಇಲ್ಲಿರುವ ಎಲ್ಲವನ್ನು ತನಗೆ ಇಷ್ಟ ಬಂದಂತೆ , ಮನಸೋ ಇಛೆ ಹಾಲುಗೆಡವುತಿದ್ದಾನೆ. ಪ್ರಕ್ರತಿಯ ಅರ್ಥವನ್ನು ತಿಳಿಯದೆ, ಅದರ ಮೂಲ ಉದ್ದೇಶವನ್ನು ತಿಳಿಯದೆ , ಎಲ್ಲವನ್ನು ನಾಶ ಮಾಡುವತ್ತ ತೆರಳುತಿದ್ದಾನೆ. ಇಲ್ಲಿರುವುದೆಲ್ಲ ತನ್ನ ಸುಖಕ್ಕಾಗಿ ಎಂಬ ತಪ್ಪು ಕಲ್ಪನೆಯಿಂದ ಇಡೀ ವಿಶ್ವವನ್ನೇ ವಿನಾಶದ ಅಂಚಿಗೆ ಕೊಂದುಯ್ಯುತಿದ್ದಾನೆ. ಅವನಿಗೆ ಅರಿವೇ ಇಲ್ಲದಂತೆ ಅವನು ತನ್ನ ವಿನಾಶದ ಕಡೆಗೆ ಹೋಗುತ್ಹಿದ್ದಾನೆ. ಇವೆಲ್ಲದಕ್ಕೂ ಕಾರಣ ಹಣದ ಹಾಗು ಐಹಿಕ  ಸುಖದ ಬಗ್ಗೆ ಇರುವ ಅತೀವ ವ್ಯಾಮೋಹ. ಹಾಗಾಗಿ ತನಗೆ ತಿಳಿಯದಂತೆಯೇ ವ್ಯಾಮೋಹಕ್ಕೆ ಒಳಗಾಗುತಿದ್ದಾನೆ. ತನ್ನ ಅಗತ್ಯಕ್ಕಿಂತ ಹೆಚ್ಚಿನ ವಸ್ತುಗಳನ್ನು , ಸೌಕರ್ಯಗಳನ್ನು ತನ್ನದಾಗಿಸಿಕೊಳ್ಳಲು ಹೆಣಗಾದುತ್ತಾನೆ. ಇದೇ ರೀತಿಯ ಒಂದು ಸೌಕರ್ಯ ಎಂದರೆ , ಮನೆಯೊಳಗಿನ ಶೌಚಾಲಯ. 
ನಾನು ಚಿಕ್ಕವನಿದ್ದಾಗ ನಾವೆಲ್ಲಾ ಶೌಚಕ್ಕಾಗಿ ಊರಿನ ಹೊರ ಭಾಗದಲ್ಲಿರುವ "ಹಾಡಿ" ಎಂದು ಕರೆಯಲ್ಪಡುವ ಕಾಡಿಗೆ ಹೋಗುತಿದ್ದೆವು. ಆಗ ನಮ್ಮ ಶೌಚವೆಲ್ಲವು ಗಿಡ ಮರಗಳಿಗೆ ಅಹಾರವಗುತ್ಹಿತ್ತು. ಆಗಿನ ಕಾಲದಲ್ಲಿ ಯಾರ ಮನೆಯಲ್ಲಿಯೂ ಶೌಚಾಲಯ ಎಂಬ ಕಲ್ಪನೆಯೇ ಇರಲಿಲ್ಲ. ಹಾಗಾಗಿ ನಾವು ಪ್ರಕ್ರತಿಯಲ್ಲಿ , ಪ್ರಕ್ರತಿಯ ಸಹಕರಿಗಳಾಗಿ ಬದುಕುತ್ಹಿದ್ದೆವು. ಆಗಿನ ಕಾಲದಲ್ಲಿ ಊರಿನಲ್ಲಿ ಅತಿ ದೊಡ್ಡ ಮನುಷ್ಯ ಯಾರು ಅಂದರೆ, ಯಾರ ಮನೆಯಲ್ಲಿ ಅತಿ ಹೆಚ್ಚು ದನ ಕರುಗಳಿದ್ದವೋ, ಅವರನ್ನೇ ಊರಿನ ಅತಿ ದೊಡ್ಡ ವ್ಯಕ್ತಿ ಎಂದು ಪರಿಗನಿಸಲ್ಪದುತ್ಹಿತ್ತು. ಆಗ ದನದ ಕೊಟ್ಟಿಗೆಯಲ್ಲಿ, ಕಾಡಿನಿಂದ ಸೊಪ್ಪುಗಳನ್ನು ತಂದು ದನಗಳ ಕಾಲಡಿಯಲ್ಲಿ ಹಾಕುತ್ತಿದ್ದರು, ಯಾಕೆ ಅಂದರೆ, ದನ ಹಾಕಿದ ಸೆಗಣಿಯಿಂದ , ಆ ಸೊಪ್ಪು ದನದ ಸೆಗಣಿ, ಮತ್ತು ಗಂಜಲ ದಿಂದ , ಅತ್ಯುತ್ತಮವಾದ ಕಾಮ್ಪೋಸ್ಟ್ ಗೊಬ್ಬರ ತಯಾರಾಗುತ್ತಿತ್ತು. ಆ ರೀತಿಯ ಗೊಬ್ಬರವೂ ಬೆಳೆಗಳಿಗೆ ಉತ್ತಮ ಅಹಾರವಗುತ್ತಿತ್ತು. ಆ ಗೊಬ್ಬರವನ್ನು ಜಮೀನಿನಲ್ಲಿ ತಂದು ಹಾಕಿದಾಗ, ಸಣ್ಣ ಸಣ್ಣ ಹುಳಗಳು ಹಾಗು ಎರೆ ಹುಳಗಳು ಅವನ್ನು ತಿಂದು , ಜಮೀನಿನೊಳಗೆ ತಮ್ಮ ಮಲವನ್ನು ಬಿಡುತ್ತಿದ್ದವು. ಅದು ಅತ್ಯುತ್ತಮ ಫಲವತ್ತಾದ ಮಣ್ಣು. ಅಲ್ಲಿ ಅತ್ಯುತ್ತಮ ಬೆಳೆ, ರೋಗ ರಹಿತ ಬೆಳೆ ಬೆಳೆದು ಬರುತ್ತಿತ್ತು. ಅಂದರೆ ಒಂದು ಮರದ ಸೊಪ್ಪು, ಗಿಡದ ತರಕಾರಿ ಇವೆಲ್ಲವೂ, ಮತ್ತೆ ಮಣ್ಣಾಗಿ , ಗೊಬ್ಬರವಾಗಿ , ನೆಲವನ್ನು ಸೇರಲು, ಎಷ್ಟು ಕಷ್ಟ ನೋಡಿ. ಮೊದಲು ಗಿಡ ಮರಗಳು ಅದೇ ಮಣ್ಣಿನಲ್ಲಿರುವ ಸತ್ವವನ್ನು ತಿಂದು, ಬೆಳೆದು , ತಮ್ಮ ಮಲ, ಎಂದರೆ, ಬೆಳೆದ ಸೊಪ್ಪು, ತರಕಾರಿ ಇತ್ಯಾದಿಗಳನ್ನು, ಮನುಷ್ಯ ಅಥವಾ ಪ್ರಾಣಿಗಳಿಗೆ ಆಹಾರ ಪೂರೈಕೆ 
ಮಾಡುತ್ತದೆ. ಅದನ್ನು ತಿಂದ ಮನುಷ್ಯ ಅಥವಾ ಪ್ರಾಣಿ ತನ್ನ ಉಪಯೋಗವಾದ ಮೇಲೆ, ಉಳಿದ ತ್ಯಾಜ್ಯವನ್ನು ಮಲದ ರೂಪದಲ್ಲಿ ಹೊರಗೆ ಹಾಕುತ್ತದೆ. ಆ ಮಲ ಪುನಃ ಸೊಪ್ಪು, ಎರೆ ಹುಳ, ನೆಲದಲ್ಲಿರುವ ಸಣ್ಣ ಜೀವ ಜಂತುಗಳ ಮುಖಾಂತರ ಪುನಃ ಅತಿ ಉತ್ತಮವಾದ , ಫಲವತ್ತಾದ ಮಣ್ಣಾಗಿ ಪುನಃ ಮರ ಗಿಡಗಳಿಗೆ ಆಹಾರಗುತ್ತದೆ. ಇದು ಒಂದು ರೀತಿಯ ಸೃಷ್ಟಿ ನಿರ್ಮಿಸಿದ ಪೂರ್ಣ ಚಕ್ರ.  ಈ ಚಕ್ರ ಸಸುತ್ರವಾಗಿ ನಡೆಯುತ್ತಿರುವಾಗ ಯಾವುದೇ ರೀತಿಯ ತೊಂದರೆಗಳು ಇರಲಿಲ್ಲ. ಆದರೆ ಮನುಷ್ಯನ ಆಸೆ ಆಕಾಂಕ್ಷೆಗಳು ಇವೆಲ್ಲವನ್ನೂ, ಅಂದರೆ ಈ ಚಕ್ರವನ್ನು ಭೇಧಿಸಲು ಪ್ರಾರಂಭ ಮಾಡಿದೆ. ಮೊಟ್ಟ ಮೊದಲನೆಯದಾಗಿ ನಾವು ಮನೆಯ ಒಳಗೆ ಶೌಚಾಲಯ ನಿರ್ಮಿಸಿ , ಗಿಡ ಮರ, ಬೆಳೆಗಳಿಗೆ ಬೇಕಾಗಿದ್ದ ಆಹಾರವನ್ನು ಅವುಗಳಿಗೆ ಸಿಗದಂತೆ ಮಾಡಿದ್ದೇವೆ. 
ಮನೆಯಲ್ಲಿ ಶೌಚಾಲಯ ಮಾಡಿದ್ದರಲ್ಲಿ ಯಾವುದೇ ತಕರಾರಿಲ್ಲ, ಆದರೆ, ಮನಿಯಲ್ಲಿ ಇರುವ ಮಲವನ್ನು ಅದರ ನಿಜವಾದ ವಾರಸುದಾರರಿಗೆ ತಲುಪಿಸುವ , ಅದರ ನಿಜವಾದ ಹಕ್ಕುದಾರರಿಗೆ ಸಿಗುವಂತೆ ಮಾಡುವ ಕಾರ್ಯವನ್ನು ಮಾತ್ರ ಮನುಷ್ಯ ಮಾಡಲೇ ಇಲ್ಲ. ಇದರಿಂದಾಗಿ ದೇವ ನಿರ್ಮಿತ ಪ್ರಕ್ರತಿಯ ಸಹಜವಾದ ಆಹಾರ ಚಕ್ರವನ್ನು ಮನುಷ್ಯ ತನ್ನ ಸೌಕರ್ಯಕ್ಕಾಗಿ ತುಂಡು ಮಾಡಿ ಬಿಟ್ಟ. ಈಗ ಮರ ಗಿಡ, ಬೆಳೆಗಳಿಗೆ ಆಹಾರ ಇಲ್ಲ. ಅದು ಮಾತ್ರ ಅಲ್ಲ, ಇದನ್ನೇ ನಂಬಿ ಕೊಂಡು, ಬದುಕಿ ಕೊಂಡಿದ್ದ ಯೆರೆ ಹುಳ , ಇತರೆ ಕ್ರಿಮಿ ಕೀಟ ಗಳ ಆಹಾರವನ್ನು ಕೂಡ ಮನುಷ್ಯ ನಾಶ ಮಾಡಿಬಿಟ್ಟ.  ಇಷ್ತಾಗಿದ್ದರೆ ಪರವಾಗಿರಲಿಲ್ಲ. ಈಗ ಮನುಷ್ಯನ ಆಹಾರಕ್ಕೂ ಕೂಡ ಕುತ್ತು ಬಂತು, ಯಾಕೆಂದರೆ, ತನ್ನ ಆಹಾರ ವನ್ನು ಕಳೆದು ಕೊಂಡಿದ್ದರಿಂದ  ಬೆಳೆಗಳು ಬೆಳೆಯುವುದನ್ನು ನಿಲ್ಲಿಸಿದವು. ಹಸುಗಳು ಹಾಲನ್ನು ಕೊಡುವುದು ನಿಲ್ಲಿಸಿದವು. ಇಲ್ಲಿ ಮನುಷ್ಯ ತನ್ನ ತಪ್ಪನ್ನು ತಿದ್ದಿ ಕೊಳ್ಳುವುದರ ಬದಲು, ಪ್ರಕ್ರತಿಯ ವಿರುಧವೆ ಸೆಡ್ಡು ಹೊಡೆದು ನಿಂತ. ಅದರ ಪರಿಣಾಮವೇ, ಕೆಮಿಕೆಲ್ ಗೊಬ್ಬರ, ಕೆಮಿಕೆಲ್ ಹಾಲು, ಎಲ್ಲವೂ ಕೆಮಿಕಾಲ್ಮಯ.  ಎಲ್ಲಿಯತನಕ ಎಂದರೆ, ನಾವೆಲ್ಲ ಹೆಮ್ಮೆಯಿಂದ ಕುಡಿಯುವ ಕೋಲ, ಪೆಪ್ಸಿ ಇತ್ಯಾದಿಗಳಿಗೆ ಪ್ರಮುಖವಾಗಿ ಬೇಕಾಗಿರುವುದೇ ಕೆಫಿನ್ ಎಂಬ ಒಂದು ಪ್ರಕ್ರತಿಕ ಪ್ರಚೋದಕ. ಆದರೆ ನಿಜವಾದ  ಕೆಫಿನ್ ಸಿಗದೇ ಇರುವುದರಿಂದ ಯುರಿಯ ದಿಂದ ಕೆಮಿಕೆಲ್ ಕೆಫಿನ್ ಅನ್ನು ತಯಾರಿಸಲಾಗುತ್ತಿದೆ. ಇವತ್ತು, ಎಲ್ಲ ರೀತಿಯ ಪೆಯಗಳಲ್ಲಿ ಹಾಕುವುದು ಕೆಮಿಕೆಲ್ ಕೆಫಿನ್. ಅದನ್ನೇ ನಾವು ಕುಡಿಯುತ್ತೇವೆ.  ಎಲ್ಲವೂ ಕೆಮಿಕೆಲ್ ಮಾಯಾ ಆಗುತ್ತಿದೆ. 
ಇದಕ್ಕೆಲ್ಲ ಕಾರಣ ಮನುಷ್ಯನ ಅತಿಯಾದ ಆಸೆ, ಆಕಾಂಕ್ಷೆಗಳು. ಕ್ರತ್ರಿಮ ಸುಖದ ಬಗ್ಗೆ ಇರುವ ಅತಿಯಾದ ಮೋಹ. 

ಮನುಷ್ಯ ಈ ಪ್ರಕ್ರತಿಯ ಚಕ್ರವನ್ನು ಕೂಡಲೇ ಸರಿಪದಿಸದಿದ್ದಲ್ಲಿ, ಖಂಡಿತವಾಗಿಯೂ ವಿಶ್ವವು ವಿನಾಶದಂಚಿಗೆ ಹೋಗುವುದರಲ್ಲಿ ಯಾವುದೇ ಸಂಶಯ ವಿಲ್ಲ. 

ಪ್ರಕತಿಯನ್ನು ಗೌರವಿಸಿ, ಬೆಳೆಸಿ, ಉಳಿಸಿ, ಅದರ ಪಾಡಿಗೆ ಅದನ್ನ್ನು ಅದರ ಕೆಲಸಗಳನ್ನು ಮಾಡಲು ಬಿಡಿ. ಅದರ ಕೆಲಸವನ್ನು ಹಾಳುಗೆದವಬೇಡಿ. ಅದರಿಂದ ನಮಗೆ ನಷ್ಟ. ಈಗಲಾದರೂ ಸರಕಾರವು ಎಚ್ಹೆತ್ತು ಕೊಂಡು ಈ ಪ್ರಕ್ರತಿಯ ಆಹಾರ ಚಕ್ರವನ್ನು ಪುನಃ ಜೋಡಿಸಲು ಪ್ರಯತ್ನ ಮಾಡಲಿ. 

3 comments:

  1. This comment has been removed by the author.

    ReplyDelete
  2. ಒಳ್ಳೆಯ ಮಾಹಿತಿಗಳಿಂದ ಕೂಡಿದ ವಿಚಾರಪೂರ್ಣಲೇಖನ ,ಥ್ಯಾಂಕ್ಸ್ ಸರ್.

    ReplyDelete
  3. ಧನ್ಯವಾದಗಳ್ರೀ ರಾಧಿಕಾವ್ರೆ

    ReplyDelete