Sunday, 18 September 2011

ಮಂದಸ್ಮಿತೆ --- ಮುಗುಳು ನಗೆ --- ವನಿತೆ -- ಗ್ರಹ ಶೋಭಿತೆ


 ( ನನ್ನ  ಮನೆಯೊಡತಿ)
( ನನ್ನ ಮನದೊಡತಿ ) 
ನನ್ನ ಮನದೊಡತಿ, ಕಷ್ಟದೊಲಿರ್ಪಾಗ ,ನನ್ನ ಒಡಗುಡಿ , ನನ್ನ ಹೆಗಲಿಗೆ ಹೆಗಲು ಕೊಟ್ಟು , ತಪ್ಪುಗೈದಾಗ ಬೈದು, ತಿದ್ದಿ , ತಿಳಿಹೇಳಿ, ಈ ಹೈದನನ್ನು ಏ ಜಿ ಎಂ ವರೆಗೆ ಏರಿಸಿ ಈಗ ನಗುತ್ತ , ನನ್ನೊಬ್ಬನನ್ನೇ ಚಂಡಿಗಡಕ್ಕೆ ಓಡಿಸಿ , ಬೆಂಗಳೂರಿನಲ್ಲಿ ನಗುತ್ತ ನಿಂತಿರುವ ನನ್ನ ಮನದನ್ನೆ , ನನ್ನ ಹ್ರದಯ, ನನ್ನ ಸರ್ವಸ್ವ .
ಸಿಟ್ಟಿ ನೊಳಗು ಪ್ರೀತಿ ಹಂಚುತ್ತಾ, ಕಹಿಯೋಳಗೂ ಸಿಹಿ ಕಾಣುತ್ತ , ಎಲ್ಲರ ಹಿತಕ್ಕಾಗಿ ಹಗಲಿರುಳು ದುಡಿಯುತ್ಹಿರುವ ನನ್ನ ಅರ್ಧ ಅಂಗಿ.
ಮಮತೆಯ ಭಂಡಾರ , ಕೋಪದ ಆಗರ, ಪ್ರಭುದ್ದ ವಿಚಾರ, ಒಳ್ಳೆಯ ಆಚಾರ, ನಮ್ಮ ಸಂಸ್ಕಾರದ ಆದರ, ನಮ್ಮ ಹಿರಿಯರ ಸತ್ಕಾರ , ಎಲ್ಲವೂ ಆಗಿರುವವಳು , ನನ್ನವಳು ಎಂಬ ಹೆಮ್ಮೆ ನನಗೆ. 
ಕಳೆದ ಇಪ್ಪತ್ತು ವರ್ಷಗಳಿಂದ ೬೦ ಬೈ ೪೦ ಸೈಟಿನ ಮನೆಯೊಳಗೇ, ನಾಲ್ಕು ಗೋಡೆಗಳ ಮಧ್ಯೆ ಎಲ್ಲರಿಗಾಗಿ ನಿರಂತರ ದುಡಿಯುತ್ಹಿರುವ ನನ್ನ ಅನ್ನಪೂರ್ಣೆ.
ಏಳೇಳು  ಜನ್ಮ ಒಟ್ಟಿಗೆ ಬಾಳಬೇಕು ಅಂತ ಹಿರಿಯರು ಹೇಳುತಾರೆ. ಈಗ ಎಷ್ಟು ಜನ್ಮ ಆಗಿದೆ ಗೊತ್ತಿಲ್ಲ. ಆದರೆ ಆ ದೇವರು ಇನ್ನು ನನ್ನ ಬಾಕಿ ಇರುವ ಎಲ್ಲ ಜನ್ಮದಲ್ಲೂ ಈ ನನ್ನ ಶಿವಮೊಗ್ಗದ  ಹುಡುಗಿಯನ್ನೇ ನನ್ನ ಜೀವನ ಬೆಳಗಲು ಕಳುಹಿಸಲಿ. 
ಮನೆಗೆ ಬಂದ ಅತಿಥಿಗಳನ್ನು , ಅತಿಥಿ ದೇವೋಭವ ಎಂಬಂತೆ ಯಾವಾಗಲು ಸತ್ಕರಿಸುವ ರಾಧಾ ಬಾಯಿಯ ಸೊಸೆ , ಹಾಗು ಅವರ ಪ್ರೀತಿಯ ಲಕ್ಷ್ಮಿ.
ಮದುವೆಯಾದಂದಿನಿಂದ ತನ್ನ ಪ್ರೀತಿಯ ಬಂಗುಡೆ ,ಭೂತಾಯಿ, ವಿಸೋಣ್, ಗಳನ್ನು, ತನ್ನ ತವರಿನಲ್ಲೇ ಬಿಟ್ಟು, ಶಾಕಾಹಾರಿಯಾಗಿ ಮಾರ್ಪಾಡಾಗಿ  , ಎಲ್ಲರ ಮನ  ಗೆದ್ದ ಈ ನನ್ನ ಒಡತಿಗಾಗಿ
( ನನ್ನೊಡತಿ )
ಈ ನನ್ನ ಪ್ರೀತಿಯ ಈ ಅನಿಸಿಕೆಗಳು.

2 comments:

  1. :-)
    good one!!your wife Radhika is my friend on Facebook..
    malathi S

    ReplyDelete
  2. ಧನ್ಯವಾದಗಳು , ಶ್ರೀಮತಿ ಮಾಲತಿಯವರೇ,
    ನಿಮ್ಮ ಅನಿಸಿಕೆಗಳಿಗೆ ನಾನು ಋಣಿ
    ರಾಡ್ ಗನ್
    ಚಂಡೀಗಡ

    ReplyDelete