ನಂದು ಒಂದು ಮನ್ಸು
ನಂಗೆ ಒಂದು ವಿಷ್ಯ ಅರ್ಥ ಆಗೋದಿಲ್ಲ, ಅದು ಅಂದ್ರೆ , ನಂಗೆ ಬುದ್ದಿ ಬಂದಾಗಿಂದ , ನಾನು ಒಂದು ನಿಮಷ ಕೂಡ ನನ್ನ ಯೋಚನೆಗಳನ್ನ , ನನ್ನ ತಲೆಯನ್ನ ಖಾಲಿ ಇಟ್ಟಿದ್ದು ನಂಗೆ ಜ್ನಾಪ್ಕಾನೆ ಬರ್ತಾ ಇಲ್ಲ , ಅದ್ರ ಅರ್ಥ ಅಂದ್ರೆ, ನನ್ನ ತಲೆ ಅಥವಾ ತಲೆ ಒಳಗೆ ಇರುವಂಥ ನನ್ನ ಮೆದಳು ( ಅಂಥಾದ್ದೊಂದು ಅಕಸ್ಮಾತ್ ನನ್ನ ತಲೆಯೊಳಗೆ ಇದ್ರೆ ) ನಿರಂತರವಾಗಿ ೨೦,೦೭೫ ದಿನಗಳ ಕಾಲ , ಅಥವಾ ೪,೮೧,೮೦೦ ಘಂಟೆಗಳ ಕಲ, ಅಥವಾ ೨,೮೯,೦೮,೦೦೦ ನಿಮಿಷಗಳ ಕಾಲ , ಅಥವಾ ೧,೭೩,೪೪,೮೦,೦೦೦ ಸೆಕೆಂಡುಗಳ ಕಾಲ , ಕೆಲ್ಸಾ ಮಾಡ್ತಾನೆ ಇದೆ. ಅಕಸ್ಮಾತ್ ಅದ್ರಲ್ಲಿ ನಿದ್ದೆ ಮಾಡಿದ ಸಮಯ , ಅಂದ್ರೆ ಸುಮಾರು ೪೩,೩೬,೨೦,೦೦೦ ಸೆಕೆಂಡ್ಗಳನ್ನು ಕಳೆದರು ಕೂಡ ಬಾಕಿ ಉಳ್ದಂತ ೧,೩೦,೦೮,೬೦,೦೦೦ ಸೆಕೆಂಡ್ಗಳ ಕಾಲ ನನ್ನ ಮೆದಳು ನಿರಂತರವಾಗಿ ಕೆಲ್ಸಾ ಮಾಡ್ತಾನೆ ಇದೆ.
ನಂಗೆ ಈಗಲೂ ಅರ್ಥ ಅಗ್ತಾ ಇಲ್ಲ , ಇದು ಹೇಗೆ ಸಾಧ್ಯಾ ಅಂತಾ. ಮತ್ತೆ ಭಾಳ ಸ್ವಾರಸ್ಯದ ಸಂಗತಿ ಅಂದ್ರೆ, ಇದು non stop , ಇದಕ್ಕೆ ಯಾವದೇ ರೀತಿಯ ಅಡಚಣೆಗಳಿಲ್ಲ , ಯಾವುದೇ ರೀತಿಯ ಬೇಸರವಿಲ್ಲ. ಇದು ಯಾವಾಗಲು ಯೋಚನೆ ಮಾಡ್ತಾನೆ ಇರುತ್ತೆ. ರಾತ್ರಿ ನಿದ್ದೆ ಮಾಡದಾಗ್ಲು ಕೂಡ ಇದಕೆ ರೆಸ್ಟ್ ಇಲ್ಲ, ಯಾಕೆ ಅಂದ್ರೆ ಆಗಲು ಕೂಡ ಇದು ಕನಸಿನ ರೂಪದಲ್ಲಿ ಯೋಚನೆ ಮಾಡ್ತಾನೆ ಇರ್ಬೇಕು.
ಅಯ್ಯೋ ಪಾಪ, ದೇವ್ರು ಸೃಷ್ಟಿ ಮಾಡೋವಾಗ, ಇದರ ಬಗ್ಗೆ ಯೋಚನೇನೆ ಮಾಡಲಿಲ್ಲ ಅಂತ ಕಾಣುತ್ತೆ. ಹಾಗಾಗಿ ಇದ್ಕೆ rest ಅನ್ನೋದೇ ಇಲ್ಲ. ಇದ್ಕೆ ರೆಸ್ಟ್ ಅಂದ್ರೆ ಬಹುಷಃ ಮನುಷ್ಯ ನಾಕು ಜನರ ಹೆಗಲು ಹತ್ತಿದ್ಮೆಲೇನೆ ಅಂತ ಕಾಣುತ್ತೆ.

ನಾನು ಎಷ್ಟೋ ಸಲ ಅಂದ್ಕೊಳೋದಿದೆ , ಎಲ್ಲ ಯೋಚನೆ ಬಿಟ್ಟು, ನಿಶಿಂತನಾಗಿ ಇರ್ಬೇಕು ಅಂತ, ಆದ್ರೆ, ನಿಜ ಹೇಳ್ಬೇಕು ಅಂದ್ರೆ, ನಿಶ್ಚಿಂತನಾಗಿ ಇರಲಿಕ್ಕೆ ಸಾಧ್ಯಾನೆ ಇಲ್ಲ. ಯಾಕೆ ಅಂದ್ರೆ, ಮನಸ್ಸು ಯಾವಾಗಲು ಏನಾದ್ರು ಯೋಚನೆ ಮಾಡ್ತಾನೆ ಇರುತ್ತೆ. ಅದು ಖಾಲಿ ಇರೋದೇ ಇಲ್ಲ.
ಮನಸ್ಸು ಅಂದ್ರೆ ಏನು, ಯಾರಾದ್ರು ನಂಗೆ ಹೇಳ್ತಿರ, ಪ್ಲೀಸ್ . ಮನಸ್ಸು ಅಂದ್ರೆ ಅದು ಎಲ್ಲಿರುತ್ತೆ ? ತಲೆಯೋಳ್ಗ, ಹ್ರದಯದೊಲ್ಗ, ಇಲ್ಲ, ಹೊಟ್ಟೆಯೋಳ್ಗಾ, ಎಲ್ಲಿರುತ್ತೆ. ಮನಸ್ಸಿನ ಪರಿಕಲ್ಪನೆ ಏನು ? ಮನಸ್ಸು ಎಂಬ ಶಬ್ದ ಎಲ್ಲಿಂದ ಬಂತು ? ಮನಸ್ಸಿಗೂ ಕೂಡ ತಲೆ ಅಂತ ಇದ್ಯಾ? ತಲೆ ಇದ್ರೆ ಅದರೊಳಗೆ ಮೆದಳು ಇದ್ಯಾ? ಈ ರೀತಿ ನಾನಾ ರೀತಿಯ ಪ್ರಶ್ನೆಗಳು ನನ್ನ ಮನಸ್ಸಿನೊಳಗೆ ಬರ್ತಾನೆ ಇರುತ್ತೆ. ಈ ಮನಸ್ಸಿಗೆ ವಿರಾಮ, ಆರಾಮ , ನಿದ್ದೆ, , ಊಟ , ಏನು ಬೇಡ್ವಾ ? ಇದಕ್ಕೆ ಸಾವು ಅಂತಾ ಇದ್ಯಾ ? ಇನ್ನು ಏನೇನೊ ಯೋಚನೆಗಳು.
ನಾನು ಯೋಗ, ಪ್ರಾಣಾಯಾಮ ಇತ್ಯಾದಿಗಳ ಮೂಲಕ , ಮನಸ್ಸಿಗೆ ಕಡಿವಾಣ ಹಾಕ್ಲಿಕ್ಕೆ ಪ್ರಯತ್ನ ಮಾಡಿದೆ, ಆದ್ರೆ, ಸಾಧ್ಯವಾಗಲೇ ಇಲ್ಲ. ಎಷ್ಟು ಪ್ರಯತ್ನ ಮಾಡಿದ್ರು ಕೂಡ, ಮನಸ್ಸು ನಿರಂತರವಾಗಿ ಯೋಚನೆ ಮಾಡ್ತಾನೆ ಇತ್ತು. ಕಣ್ಣು ಬಿಟ್ಟಿರಲಿ, ಮುಚಿರ್ಲಿ, ಮನಸ್ಸು ಮಾತ್ರ ಸದಾ ಯೋಚನೆ ಮಾಡ್ತಾನೆ ಇರುತ್ತೆ.
ಆಮೇಲೆ ಧ್ಯಾನ ಮಾಡ್ತಾ ಇರೋದ್ರಿಂದನಾದ್ರೂ ಮನಸ್ಸು ಏನಾದ್ರು , ಧ್ಯಾನದ ಕಡೆಗೆ ಮನಸ್ಸು ಕೊಟ್ಟು, ಯೋಚನೆ ಮಾಡೋದ್ ಬಿಡುತ್ತೇನೋ ಅಂತ , ಧ್ಯಾನದ ಕಡೆ ಗಮನ ಕೊಟ್ಟೆ, , ಏನೂ ಉಪಯೋಗ ಇಲ್ಲ, ಮನಸ್ಸು ಸುಮ್ನೆ ಇರಲೇ ಇಲ್ಲ, ಯಥಾ ಪ್ರಕಾರ ತನ್ನ ಪಾಡಿಗೆ ತಾನು ಯೋಚನೆ ಮಾಡ್ತಾನೆ ಇತ್ತು. ಹಾಗಾದ್ರೆ ಏನು ಮಾಡೋದು, ಪಾಪ , ಈ ಮನಸ್ಸಿಗೆ ಹೇಗೆ ರೆಸ್ಟ್ ಕೊಡೋದು, ಅಂತ ನನಗೆ ತುಂಬಾ ಚಿಂತೆ ಹತ್ಕೊಂಡ್ಬಿಟ್ಟಿದೆ.
ನನಗೆ ಚಿಂತೆ ಅಂದ್ರೆ, ನಾವೇ ನಿರಂತರವಾಗಿ ಮನಸ್ಸನ್ನ ಈ ರೀತಿ ಯೋಚನೆ ಮಾಡೋದಿಕ್ಕೆ ಉಪಯೋಗಿಸ್ತಾ ಇದ್ರೆ, ಅದೂ ಕೂಡ ರೆಸ್ಟ್ ಇಲ್ದೇನೆ , ಅದಕ್ಕೆನಾದ್ರು, ಹುಶಾರಿಲ್ದೇ ಆಗಿ, ಜ್ವರ ಗಿರ ಬಂದು ಮಲ್ಕೊಂಡ್ ಬಿಟ್ರೆ ಏನ್ಮಾಡೋದು.
ನಾನು ಕೂಡ ಇಲ್ಲಿ ದೂರದ ಚಂದಿಗಡದಲ್ಲಿ ಒಬ್ಬನೇ, ಒಬ್ಬಂಟಿಗನಾಗಿ ಇದ್ದೇನೆ, ಮನಸ್ಸಿಗೆ ಏನಾದ್ರೂ ಹುಷಾರಿಲ್ಲ ಆದ್ರೆ, ನೋಡ್ಕೋಳೋರ್ ಯಾರು? ಅದೂ ಅಲ್ದೆ ಆ ಮನಸು ಗಂಡೋ ಹೆಣ್ಣೋ ಗೊತ್ತಿಲ್ಲ , ಹಾಗಾಗಿ, ಅಕಸ್ಮಾತ್ ಡಾಕ್ಟರ ಹತ್ತಿರ ಕರ್ಕೊಂಡ್ ಹೋಗಬೇಕಾಗಿ ಬಂದ್ರೆ, ಯಾವ್ ಡಾಕ್ಟ್ರತ್ರ ಕರ್ಕೊಂಡ್ ಹೋಗ್ಲಿ, ಲೇಡಿ ಡಾಕ್ಟ್ರ ಹತ್ರಾನೋ ಅಥವಾ ಗಂಡು ಡಾಕ್ಟ್ರ ಹತ್ರಾನೋ? ಈ ರೀತಿಯ ನೂರಾರು ಸಮಸ್ಯೆಗಳು, ಮನಸ್ಸಿನ ತುಂಬಾ ಇದೆ ರೀತಿಯ ಯೋಚನೆಗಳು.

ಕೆಲವ ಸಲ ಅನ್ಸುತ್ತೆ, ಜೋಗುಳ ಹಾಡಿ ಮನಸನ್ನ ಮಲಗಿಸ್ಲಾ ಅಂತಾ, ಆದ್ರೆ ನನ್ನ ಜೋಗುಳ ಕೇಳಿದ್ರೆ, ಪಕ್ಕದ್ ಮನೆ ರಾಣಿಯ ಮೂರು ವರ್ಷದ ಸಣ್ಣ ಮಗು ಕುಡು ಹೆದರ್ಕೊಂಡು ಎದ್ದು ಕೂತ್ಕೊಂಡ್ ಅಳೋಕ್ಕೆ ಸುರುಮಾಡಿ ಬಿಡುತ್ತೆ, , ಇನ್ನು ನನ್ನ ಮೃದುವಾದ , ಕೋಮಲವಾದ , ಮನಸು ಅದ್ಹೇಗೆ ತಾನೇ ಮಲ್ಕೊಂಡ್ ಬಿಡುತ್ತೆ.
ಹಾಗಾಗಿ ಆ ಯೋಚನೆ ಬಿಟ್ಟು ಬಿಟ್ಟೆ. ಕಡೆಗ ಅಂದ್ಕೊಂಡೆ, ನಮಗೆಲ್ಲ ರಾತ್ರಿ ಎರಡು ಪೆಗ್ ಹೊಡೆದ ತಕ್ಷಣ ಒಳ್ಳೆ ನಿದ್ದೆ ಬಂದ್ ಬಿಡುತ್ತೆ, , ನನ್ನ ಮನಸಿಗೂ ಕೂಡ , ಎರಡು ಪೆಗ್ ಹೊಡ್ಸಿಬಿಟ್ರೆ ಹ್ಯಾಗೆ ಅಂತ. ಆಮೇಲೆ ಅನ್ನಿಸ್ತು ,
ನಂಗೇನೋ ಪೆಗ್ ಹೊಡ್ದು ಅಭ್ಯಾಸ ಇದೆ, ಆದ್ರೆ ಆ ಮನಸಿಗೆ ಅಭ್ಯಾಸ ಇರಬೇಕಲ್ಲ. ಎಲ್ಲಾದ್ರು ಟೈಟ್ ಆಗಿ ಖಾಯಂ ಆಗಿ ಮಲ್ಕೊಂಡ್ ಬಿಟ್ರೆ , ನನ್ನ ಯೋಚನಾ ಲಹರಿಯ ಗತಿಯೇನು , ಅನ್ನಿಸಿ ಬಿಡ್ತು, ಹಾಗಾಗಿ ಅದನ್ನು ಕೈ ಬಿಟ್ ಬಿಟ್ಟೆ. .

ನನಗೆ ನನ್ನ ಮನಸ್ಸಿನ ಬಗ್ಗೆ, ಅದರ ಆರೋಗ್ಯದ ಬಗ್ಗೆ ತುಂಬ ಚಿತೆಯಾಗಿ ಬಿಟ್ಟಿದೆ, ಹಾಗಾಗಿ ನನ್ನ ಮನಸ್ಸು, ಅದ್ರ ಬಗ್ಗೆನೇ ತುಂಬ ಯೋಚನೆ ಮಾಡ್ತಾ ಇದೆ. ನಿಮಗೆ ಏನಾದ್ರು ದಾರಿ ಗೊತ್ತಿದ್ರೆ, ದಯವಿಟ್ಟು ತಿಳಿಸ್ತೀರ
ಮನಸ್ಸಿನ ಇನ್ನೊಂದು ವಿಶೇಷತೆ ಅಂದ್ರೆ, ಪ್ರತಿಯೊಬ್ಬ ಮನುಷ್ಯ , ಪ್ರಾಣಿಯಲ್ಲು ಕೂಡಾ ಮನಸ್ಸು ಅಂತ ಇರುತ್ತೆ, ಮತ್ತೆ ಅದೂ ಯೋಚನೆ ಮಾಡ್ತಾನೆ ಇರುತ್ತೆ. ಪ್ರತಿಯೊಬ್ಬರ ಯೋಚನಾ ಲಹರಿ, ಯೋಚನೆಯ ಧಾಟಿ, ವಿಷಯ , ಎಲ್ಲವೂ ಬೇರೆ ಬೇರೆ ಆಗಿರುತ್ತೆ. ಅಂದ್ರೆ, ಪ್ರಪಂಚದಲ್ಲಿ, ೪೦೦ ಕೋಟಿ ಜನ ಇದ್ದಾರೆ ಅಂದ್ರೆ, ೪೦೦ ಕೋಟಿ ರೀತಿಯ , ೪೦೦ ಕೋಟಿ ಬೇರೆ ಬೇರೆ ವಿಷಯಗಳ ಬಗ್ಗೆ ಮನಸ್ಸು ಯೋಚನೆ ಮಾಡ್ತಾ ಇರುತ್ತೆ. ಅಬ್ಬ , ಯೋಚನೆ ಮಾಡಿದ್ರೆ, , ನನ್ನ ಮನಸಿಗೆ ಆಶ್ಚರ್ಯ ಆಗುತ್ತೆ, , ಮತ್ತು ನನ್ನ ಮನಸು ಅದ್ರ ಬಗ್ಗೆನೇ ಯೋಚನೆ ಮಾಡ್ಲಿಕ್ಕೆ ಸುರು ಮಾಡುತ್ತೆ.
ಮನುಷ್ಯ ಯಾವಾಗಲು, ಮನಸ್ಸಿನಲ್ಲಿ ಇದ್ದಿದ್ದನ್ನೇ ಬಾಯಲ್ಲೂ ಹೇಳಿ ಬಿಡ್ತಾನೆ ಅಂತ ಏನು ಇಲ್ಲ. ಮನಸ್ಸು ಒಂದು ಯೋಚನೆ ಮಾಡ್ತಾ ಇರುತ್ತೆ, ಆದ್ರೆ, ಬಾಯಿ ಮಾತ್ರ ಬೇರೇನೆ ಏನಾದ್ರು ಹೇಳ್ತಾ ಇರುತ್ತೆ. ಹಾಗಾಗಿ, ಬೇರೆಯವರ ಮನಸು ಏನು ಯೋಚನೆ ಮಾಡ್ತಾ ಇದೆ ಅಂತ , ನಮ್ಮ ಮನಸಿಗೆ ಗೊತ್ತಾಗೋದೇ ಇಲ್ಲ.
ಅಕಾಸ್ಮಾತ್, ಮೊಬೈಲ್ ನಲ್ಲಿ, ಇದ್ದಂತ, ನಮ್ಮ ಮನಸ್ಸಿಗೂ ಕೂಡ, ಬ್ಲೂ ಟುಥ್ ಅಂತ ಇದ್ದಿದ್ರೆ, ಎಷ್ಟು ಚೆನ್ನಾಗಿತ್ತು. ಪಕ್ಕದ ಮನೆ ರಾಣಿ ನನ್ನ ಬಗ್ಗೆ ಏನ್ ಯೋಚನೆ ಮಾಡ್ತಾ ಇದ್ದಾಳೆ ಅಂತ ನಾನು ಕುಡ್ಲೆ ತಿಳ್ಕೋ ಬಹುದಿತ್ತು. ನನ್ನ ಬ್ಲೂ ಟುಥ್ ನ್ನು , ಅವಳ ಮನಸ್ಸಿನ ಜೊತೆ ಜೋಡ್ಸಿ ಬಿಟ್ರೆ ಸಾಕಾಗಿತ್ತು, , ಕೂಡಲೇ, ಅವಳ ಮನಸ್ಸಿನಲ್ಲಿದ್ದಿದ್ದೆಲ್ಲ ನನ್ನ ಮನಸಿಗೆ ವರ್ಗಾವಣೆ ಆಗಿ ಬಿಡ್ತಾ ಇತ್ತು.

ಇದ್ರಲ್ಲಿ, ಅಪಾಯನು ಇದೆ, ಯಾಕೆ ಅಂದ್ರೆ, ಅಕಸ್ಮಾತ್ ಅವ್ಳು ಮನಸೊಳಗೆ ನನ್ನನ್ನು "ಅಂಕಲ್ " ಅಂತಾ ಏನಾದ್ರು ಅಂದ್ಕೊಂಡಿದ್ರೆ, .
ಇದರೊಳಗೆ ಇನ್ನೊದು ಅಪಾಯನು ಇದೆ, ಅದೂ ಅಂದ್ರೆ, ಅದೇ, ಬ್ಲೂ ಟೂಥ್ ಉಪ್ಯೋಗ್ಸಿ ಕೊಂಡು, ನನ್ನ ಹೆಂಡ್ತಿ ಏನಾದ್ರು , ನನ್ನ ಮನಸ್ಸು ಮಾಡ್ತಾ ಇರೋ ಯೋಚನೆಗಳನ್ನೆಲ್ಲ ತನ್ನ ತಲೆಗೆ ವರ್ಗ ಮಾಡ್ಕೊಂಡ್ ಬಿಟ್ರೆ, , ಅಯ್ಯಯ್ಯಪ್ಪ, ಬೇಡ, ಈ ಬ್ಲೂ ಟೂತು ಬೇಡ, ಈ ಮನಸ್ಸಿನ ಯೋಚನೆ ಗಳು ಬೇಡ.

ರಾತ್ರಿ ಭಾಳ ಹೊತ್ತಾಯ್ತು, ಯಾಕೋ ಮನಸಿಗೆ ಭಾಳ ಸುಸ್ತಾಗ್ತಿದೆ, ಇನ್ನು ಮಲ್ಕೊಂಡ್ ಬಿಡ್ತೀನಿ, ಓ,ಕ , ನನ್ನ ಕೋಮಲವಾದ ಮನಸ್ಸೇ, ಶುಭ ರಾತ್ರಿ, , ಚೆನ್ನಾಗಿ ಮಲ್ಕೊಂಡು , ನನಗೋಸ್ಕರ ಒಳ್ಳೊಳ್ಳೆ ಕನಸುಗಳನ್ನು ಕಾಣು.