ನಾವು ನಾಲ್ಕು ಜನ ಖಖಖ ರು , ಚಂದಿಗಡದಲ್ಲಿ ಒಂದೇ ಸೂರಿನಡಿಯಲ್ಲಿ , ನಮ್ಮ ಖಿಖಿಖಿ ಗಳನ್ನೂ ನಮ್ಮ ನಮ್ಮ ಊರಿನಲ್ಲಿ ಬಿಟ್ಟು , ನಮ್ಮ ಹೊಟ್ಟೆ ಪಾಡಿಗಾಗಿ ಒದ್ದಾಡ್ಕೊಂಡು ಜೀವನ ಸಾಗಿಸ್ತಾ ಇದ್ದೇವೆ.ನಾಕು ಜನ ಕೂಡ ನಾಲ್ಕು ವಿಭಿನ್ನ ಸ್ಪೆಸಿಮನ್ ಗಳು , ನಾಲ್ಕು ರೀತಿಯ ವಿಭಿನ್ನ ರೀತಿಯ ಖಖಖ ರು. ಒಬ್ಬ ಆಕಾಶ ನೋಡ್ತಾ ಗುಣ ಗುಣಿಸ್ತ ಇದ್ರೆ, ಇನೊಬ್ಬ ನೆಲ ನೋಡ್ತಾ ಗುಣಿ ಗುಣಿಸ್ತಾ ಇರ್ತಾನೆ. ಮತ್ತೊಬ್ಬ ಬಾತ್ ರೂಂ ಸಿಂಗರ್ ಆದ್ರೆ, ಇನೊಬ್ಬ ರಾಜಕೀಯ ಪುಡ್ಹಾರಿ. ಹೀಗೆ ನಮ್ಮೆಲ್ರದ್ದು ಕೂಡ ಡಿಫರೆಂಟ್ ಸ್ಟೈಲ್. ಒಬ್ನಿಗೆ ಹುಣಸೆ ಹಣ್ಣು ಆಗೋದಿಲ್ಲ ಅಂದ್ರೆ, ಇನ್ನೊಬ್ಬನಿಗೆ ನಿಂಬೆ ಹಣ್ಣು ಆಗೋದಿಲ್ಲ, ಮತ್ತೊಬ್ಬನಿಗೆ ಟೊಮೇಟೊ ಆಗೋದಿಲ್ಲ, ಹೀಗೆ ಯಾರದು ಕೂಡ ಒಬ್ರಿದೊಬ್ರಿಗೆ ಮ್ಯಾಚ್ ಆಗೋದಿಲ್ಲ. ಒಬ್ಬ ನಾನ್ ವೆಜ್ ಆದ್ರೆ, ಮತ್ತೊಬ್ಬ ವೆಜ್, ಇನ್ನೊಬ್ಬ ವೆಜ್. ಹೀಗೆ ಎಲ್ಲರೂ ಡಿಫರೆಂಟ್. ಆದ್ರೆ ಒಂದ್ ವಿಷಯದಲ್ಲಿ ಮಾತ್ರ ಎಲ್ಲರೂ ಒಗ್ಗಟ್ಟು , ಅದು ಅಂದ್ರೆ ಎಣ್ಣೆ ಹೊಡಿಯೋದ್ರಲ್ಲಿ , ಅದ್ರಲ್ಲಿ ಮಾತ್ರ ಎಲ್ಲರೂ ಒಂದು.
ನಾವು ಇರೋ ಮನೆ ಒಟ್ಟಿಗೆ ನಾಲ್ಕು ರೂಂ ಇದೆ, ಎರಡು ಟಾಯ್ಲೆಟ್ ಇದೆ, ಮತ್ತು ನಾವೆಲ್ಲಾ ಬ್ಯಾಂಕ್ ನಲ್ಲೆ ಇರೋದ್ರಿಂದ ಎಲ್ಲರ ಬ್ಯಾಂಕ್ ಸಮಯ ಒಂದೇ, ಎಲ್ಲರೂ ಒಟ್ಟಿಗೆ ತಯಾರಾಗ ಬೇಕು. ಇಲ್ಲಿ ನಮ್ಮ ಡಿಫರೆಂಟ್ ನೇಚರ್ ಕೆಲ್ಸಕ್ಕೆ ಬರುತ್ತೆ. ಯಾಕೆ ಅಂದ್ರೆ, ಒಬ್ಬ ಬೇಗ್ ಎದ್ರೆ, ಇನ್ನೊಬ್ಬ ಲೇಟ ಏಳ್ತಾನೆ, ಮತ್ತೊಬ್ಬ ವಾಕಿಂಗ್ ಹೋಗಿ ಬರ್ತಾನೆ, ಹೀಗಾಗಿ ಬೆಳಿಗ್ಗೆ ಟಾಯ್ಲೆಟ್ ಸಮಸ್ಯೆ ಬೋರೋದಿಲ್ಲ.
ಒಬ್ಬ ಬೆಳಿಗ್ಗೆ ಆರು ಘಂಟೆಗೆನೆ ಎದ್ದು ತನ್ನ ದೈನಂದಿನ ಪ್ರಾತರ್ವಿಧಿಗಳನ್ನೆಲ್ಲ ಮುಗಿಸಿಕೊಂಡ್ ಬಿಟ್ರೆ, ಇನ್ನೊಬ್ಬ ನಿಧಾನಕ್ಕೆ ಎದ್ದು, ತನ್ನ ಪ್ರಾತರ್ವಿಧಿ ಕೆಲಸಗಳನ್ನ ಸುರು ಮಾಡ್ತ್ತಾನೆ. ಒಟ್ಟಿಗೆ ಹೇಳ್ಬೇಕು ಅಂದ್ರೆ, ನಮಗೆ ಯಾವತ್ತು ಕೂಡ ಬೆಳಿಗ್ಗೆ ಹೊತ್ತು ಟಾಯ್ಲೆಟ್ ಬಿಸಿ ಸಮಸ್ಯೆ ಬರಲೇ ಇಲ್ಲ. ಅದ್ರ ಮಧ್ಯೆ ಬೆಳಿಗ್ಗೆ ಬೇಗ್ ಎದ್ ಕುಡ್ಲೆ ಒಬ್ಬನಿಗೆ ದೇವರ ಪೂಜೆ ಮಾಡ್ಬಕು, ಅವಾಗ ಇನ್ನೊಬ್ಬ, ದೇವರಿಗೆ ಹೊಡ್ದ ಘಂಟೆ ಕೇಳಿ, ನಿಧಾನಕ್ಕೆ ಏಳ್ತಾನೆ. ಇನ್ನೊಬ್ಬಂಗೆ ಬೆಳಿಗ್ಗೆ ಎದ್ ತಕ್ಷಣ ಚಾ ಬೇಕು, ಹಾಗಾಗಿ ಅವ್ನು ಬೇಗ್ ಎದ್ದು ಚಾ ಮಾಡಿ, ಬಾಕಿ ಯಲ್ಲರ್ ಚಾ ಕಪ್ಪನ್ನ ಜೋಡ್ಸಿ ಇಟ್ಟ ಬಿಡ್ತಾನೆ. ಒಬ್ಬೊಬ್ರೆ ತಮ್ ತಮ್ ಕೆಲಸ ಮುಗಿಸ್ಕೊಂಡು ಚಾ ಕುಡಿತಾರೆ.
ಲೇಟಾಗಿ ಬಂದವರು ಚಾ ತಣ್ಣಗಾಗಿ ಬಿಟ್ಟಿದ್ರೆ, ಅದನ್ನ ಓವನ್ನಲ್ಲಿ ಇತ್ತು ಬಿಸಿ ಮಾಡ್ಕೊಂಡು ಕುಡಿತಾರೆ. ನಂತರ ಪೇಪರ್ ತೆಕೊಂಡ್ ಎಲ್ಲ ಕೊತ್ಕೊಂದ್ಬಿಟ್ರೆ ನೆಕ್ಸ್ಟ್ ಒಂದ್ ಘಂಟೆ ಎಲ್ಲರೂ ಬಿಸಿ, ದೇಶ, ಪ್ರಪಂಚ, ಎಲ್ಲ ವಿಷಯದ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತೆ.
ಒಬ್ಬ ಬೆಳಿಗ್ಗೆ ಆರು ಘಂಟೆಗೆನೆ ಎದ್ದು ತನ್ನ ದೈನಂದಿನ ಪ್ರಾತರ್ವಿಧಿಗಳನ್ನೆಲ್ಲ ಮುಗಿಸಿಕೊಂಡ್ ಬಿಟ್ರೆ, ಇನ್ನೊಬ್ಬ ನಿಧಾನಕ್ಕೆ ಎದ್ದು, ತನ್ನ ಪ್ರಾತರ್ವಿಧಿ ಕೆಲಸಗಳನ್ನ ಸುರು ಮಾಡ್ತ್ತಾನೆ. ಒಟ್ಟಿಗೆ ಹೇಳ್ಬೇಕು ಅಂದ್ರೆ, ನಮಗೆ ಯಾವತ್ತು ಕೂಡ ಬೆಳಿಗ್ಗೆ ಹೊತ್ತು ಟಾಯ್ಲೆಟ್ ಬಿಸಿ ಸಮಸ್ಯೆ ಬರಲೇ ಇಲ್ಲ. ಅದ್ರ ಮಧ್ಯೆ ಬೆಳಿಗ್ಗೆ ಬೇಗ್ ಎದ್ ಕುಡ್ಲೆ ಒಬ್ಬನಿಗೆ ದೇವರ ಪೂಜೆ ಮಾಡ್ಬಕು, ಅವಾಗ ಇನ್ನೊಬ್ಬ, ದೇವರಿಗೆ ಹೊಡ್ದ ಘಂಟೆ ಕೇಳಿ, ನಿಧಾನಕ್ಕೆ ಏಳ್ತಾನೆ. ಇನ್ನೊಬ್ಬಂಗೆ ಬೆಳಿಗ್ಗೆ ಎದ್ ತಕ್ಷಣ ಚಾ ಬೇಕು, ಹಾಗಾಗಿ ಅವ್ನು ಬೇಗ್ ಎದ್ದು ಚಾ ಮಾಡಿ, ಬಾಕಿ ಯಲ್ಲರ್ ಚಾ ಕಪ್ಪನ್ನ ಜೋಡ್ಸಿ ಇಟ್ಟ ಬಿಡ್ತಾನೆ. ಒಬ್ಬೊಬ್ರೆ ತಮ್ ತಮ್ ಕೆಲಸ ಮುಗಿಸ್ಕೊಂಡು ಚಾ ಕುಡಿತಾರೆ.
ಲೇಟಾಗಿ ಬಂದವರು ಚಾ ತಣ್ಣಗಾಗಿ ಬಿಟ್ಟಿದ್ರೆ, ಅದನ್ನ ಓವನ್ನಲ್ಲಿ ಇತ್ತು ಬಿಸಿ ಮಾಡ್ಕೊಂಡು ಕುಡಿತಾರೆ. ನಂತರ ಪೇಪರ್ ತೆಕೊಂಡ್ ಎಲ್ಲ ಕೊತ್ಕೊಂದ್ಬಿಟ್ರೆ ನೆಕ್ಸ್ಟ್ ಒಂದ್ ಘಂಟೆ ಎಲ್ಲರೂ ಬಿಸಿ, ದೇಶ, ಪ್ರಪಂಚ, ಎಲ್ಲ ವಿಷಯದ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತೆ.
ನಂತರ ಸುರು ಆಗುತ್ತೆ ನಮ್ಮೆ ಕಿಚನ್ ಫ್ಯಾಕ್ಟರಿ. ಇದು ಒಂಥರಾ ಮಾನಾಪಲಿ , ಇಲ್ಲಿ ಬೆಳಿಗ್ಗೆ ಬೇಗ ಎದ್ದು, ದಿನ ನಿತ್ಯವೂ, ತಾವೇ ಅಡಿಗೆ ಮಾಡ್ತಾರೆ, ನಮ್ಮ ಮರಿ. ಓ ಕ್ಷಮಿಸಿ, ನಾನು ಯಾರನ್ನು ಕೂಡ ಇನ್ನು ನಿಮಗೆ ಪರ್ಚಯಾನೆ ಮಾಡ್ಕೊಟ್ಟಿಲ್ಲ ಅಲ್ಲವಾ. ಈಗ ನಾನು ಇಲ್ಲಿರೋ ನಾಲ್ಕು ಜನ ಮಹಾನುಭಾವರುಗಳ ಪರಿಚಯ ಮಾಡಿಕೊಡ್ತೀನಿ .
ಇದು ಮರಿ, ನಮ್ಮೆಲ್ಲರ ಕುರಿ ಮರಿ, प्यारी ಕುರಿ ಮರಿ, ವೆರಿ ವೆರಿ ಪ್ಯಾರಿ ಕುರಿ ಮರಿ, ವೆರಿ ವೆರಿ ಪ್ಯಾರಿ ಕರಿ ಕುರಿ ಮರಿ, ಮಂದೆಯಲ್ಲಿ ಒಂದಾಗಿ, ಎಲ್ಲರಿಗೂ ತಲೆಬಾಗಿ , ಗುಂಪಿನಲ್ಲಿ ಸಾಗೋ ನಮ್ಮ ಕರಿ ಕುರಿ ಮರಿ, ಉರುಫ್ ಶ್ರೀ ಮರಿಸ್ವಾಮಿ, ನಮ್ಮೆಲ್ಲರ ಹಿರಿಯ ಪ್ರಬಂಧಕರು. ಯಾವಾಗಲು ನಗ್ತಾನೆ ಇರ್ತಾರೆ. ಬಯ್ದರು ನಗ್ತಾರೆ, ಹೊಗಳಿದರು ನಗ್ತಾರೆ, ಯಾವಾಗ್ ನೋಡಿದರು ನಗ್ತಾನೆ ಇರ್ತಾರೆ. ಯಾಕ್ ನಗ್ತಾರೆ, ಹ್ಯಾಗೆ ಯಾರಿಗೆ ನೋಡಿ ನಗ್ತಾರೆ ಗೊತ್ತಾಗಲ್ಲ. ಒಟ್ಟಿಗೆ ನಗ್ತಾನೆ ಇರ್ತಾರೆ.
ಒಂಥರಾ, ಲಾಫಿಂಗ್ ಬುಧ್ಧ ಅಥವ ಲಾಫಿಂಗ್ ಕ್ವೀನ್ ಅರ್ಚನ ಪೂರಣ್ಸಿಂಗ್ ಇದ್ ಹಾಗೆ.
ಬೇಜಾರ್ ಅನ್ನೋದು ಇವರ ಡಿಕ್ಷನರಿ ನಲ್ಲಿ ಇಲ್ವೆ ಇಲ್ಲ. ಎಣ್ಣೆ ಹೊಡಿಯೋದ್ರ ಬಗ್ಗೆ ಇವರದ್ದು ಬಹಳ ವಿರೋಧ ಇದೆ. ಹಾಗಾಗಿನೆ ಇವ್ರು ಎಣ್ಣೆ ಹೊಡಿಯೋದನ್ನ ತಮ್ಮ ಜೀವನದಲ್ಲಿ, ಸುಮಾರು, ಒಂದು ಸಾವಿರ ಬಾರಿಗಿಂತಲೂ ಹೆಚ್ಹು ಬಾರಿ ಬಿಟ್ಟಿದ್ದಾರೆ. ಡೈಲಿ ರಾತ್ರಿ , ಇವ್ರು ಪ್ರತಿಜ್ಞೆ ಮಾಡ್ತಾರೆ, ಇವತ್ತೇ ಕೊನೆ ಇನ್ ಮುಂದೆ ನಾನು ಎಣ್ಣೆ ಹೊಡಿಯೋದೆ ಇಲ್ಲ ಅಂತಾ. ಅವ್ರ ಆ ಪ್ರತಿಜ್ಞೆ ನಮಗೆಲ್ಲ ಒಂಥರಾ ಆದರ್ಶ ಇದ್ದಾಗೆ, ಯಾಕೆ ಅಂದ್ರೆ ಒಂದ್ ದಿನಾನು ತಪ್ಪಿಸದೆ ಅವ್ರ ಜೊತೆ ಸೇರ್ಕೊಂಡು ನಾವೆಲ್ಲ ಕೂಡ , ಅವ್ರ ಲೀಡರ್ಶಿಪ್ನಲ್ಲಿ ದಿನಾನು, ಆ ಪ್ರತಿಜ್ಞೆ ಮಾಡ್ತಾ ಇರ್ತೀವಿ. ದೇವರಾಣೆಗೂ ಹೇಳ್ತಾ ಇದ್ದೀನಿ, ಆ ಪ್ರತಿಜ್ಞೆ ನಾವು ಒಂದು ದಿವ್ಸಾನು ತಪ್ಸಿಲ್ಲ. ಹೀಗೆ, ನಮಗೆಲ್ಲರಿಗೂ, ಎಣ್ಣೆ ಹೊಡಿ ಬರದು ಅಂತಾ, ದಿವ್ಸಾ ರಾತ್ರಿ, ಜ್ಞಾಪಕ ಮಾಡಿಸ್ತಾ ಇರ್ತಾರೆ.
ಎಣ್ಣೆ ಅಂಗಡಿಯವನಿಗೂ ಗೊತ್ತು, ನಮ್ಮ ಈ ಪ್ರತಿಜ್ಞೆ ಬಗ್ಗೆ, ಹಾಗಾಗಿ ಅವ್ನು ಕೂಡ, ನಾವ್ ಅವ್ನ ಅಂಗಡಿ ಹತ್ರ ಹೋದ ತಕ್ಷಣ ಹೇಳ್ತಾನೆ, " ಸಾಹೇಬ್ ಆಜ್ ಲಾಸ್ಟ್ ಹೈ, ಲೇ ಜಾವ್, ಕಲ್ಸೇ ತೋ ಆಪ್ ಪೀನೆವಾಲೆ ನಹಿ ಹೈ, ಇಸ್ ಲಿಯೇ ಆಜ್ ಆಖ್ರೀ ಬಾರ್ ಲೇ ಜಾವ್ " . ಆಗ್ ನಮ್ ಮರಿಗೆ ಅನ್ಸುತ್ತೆ, ಹೌದಲ್ವೆ, ಇವತ್ತೇ ಲಾಸ್ಟು , ನಾಳೆಯಿಂದ ಎಣ್ಣೆ ಹೊಡಿಯೋ ಹಂಗಿಲ್ಲ, ಯಾಕೆ ಅಂದ್ರೆ ನಾವ್ ಪ್ರತಿಜ್ಞೆ ಮಾಡೋವ್ರಿದ್ದಿವಲ್ಲ ಇವತ್ತು ರಾತ್ರಿ. ಹೀಗಿ ನಮ್ಮ ಡೈಲಿ ಕಥೆ ನಡಿತಾನೆ ಇರುತ್ತೆ. ಹಾ, ಇನ್ನೋದ್ ವಿಷ್ಯ, ಇವರ ಹತ್ತಿರ ಹುಣಸೆ ಹಣ್ಣಿನ ವಿಚಾರ ಮಾತ್ರಾ ತೆಗಿಬೇಡಿ , ಭಾಳ ಸೆಂಟಿಮೆಂಟಲ್ (ಮೆಂಟಲ್ ) ಆಗಿ ಬಿಡ್ತಾರೆ. ಇವರಿಗೂ ಹುಣಸೆ ಹಣ್ಣಿಗು ಆಗೋದಿಲ್ಲ, ಜನ್ಮ ಜನ್ಮಾಂತರದ ವೈರತ್ವ. ಹಾಗಾಗಿ ಇಲ್ಲಿ, ನಮ್ಮ ಮನೆಯಲ್ಲಿ, ನಾವು ಹುಣಸೆ ಹಣ್ಣನ್ನ ಕದ್ದು ಮುಚ್ಹಿ ತರ್ತೀವಿ. ಆಗಲು ಕೂಡ, ನಾವೇನಾದ್ರೂ, ಯಾವ್ದಾದ್ರು ಅಡ್ಗೆಗೆ ಹುಣಸೆ ಹಣ್ಣು ಹಾಕಿ ಬಿಟ್ವಿ ಅಂದ್ರೆ, ಅವ್ರ ಮುಗು ಕುಡ್ಲೆ , ಪಿನೋಕಿಯೋ ಮೂಗ ತರಾ ಉದ್ದ ಆಗಿಬಿಡುತ್ತೆ, ಓಡಿ ಬಂದ್ ಬಿಡ್ತಾರೆ, " ಅಣ್ಣ , ಹುಣಸೆ ಹಣ್ಣ ತಂದಿದಿರ" .
ಅವ್ರ ಮೂಗು ಅಷ್ಟೊಂದು ಸೂಕ್ಷ್ಮ . ಆ ಕಡೆ, ಈ ಕಡೆ ಮನೆಗಳಲ್ಲೆಲ್ಲ ಅವ್ರು ತುಂಬಾ ಫೇಮಸ್, ಯಾಕೆ ಅಂದ್ರೆ, ಅವ್ರ ಬಡತನ ನೋಡಿ. " ಅಯ್ಯೋ , ಬ್ಯಾಂಕ್ನಲ್ಲಿ ಹಿರಿಯ ಪ್ರಭಂದಕರು ಅಂತೀರಾ, ಮತ್ಯೆಂಥ ಬಡ್ತನಾರಿ ? ಅಂತ ನೀವ್ ಕೇಳಬಹುದು, ಅದ್ಕೆ ಕಾರಣ ಇದೆ, ಈ ನಮ್ಮ ಮರಿ, ಬ್ಯಾಂಕ್ನಿಂದ ಮನೆಗ್ ಬರ್ತಿದ್ದಂಗೆ, ಮಂಡ್ಯ ಗೌಡರ ಥರ, ಒಂದು ಹಳೆ ಹರಕು ಲುಂಗಿ ಉಡ್ಕೊಂಡು, ಮೇಲೆ ಏನು ಬಟ್ಟೆ ಹಾಕೊಳ್ದೆನೆ , ತಮ್ಮ ಮೇಲಿನ ಬಾಡಿಯ ಕರಿ ಕರಿ ಮಿಂಚ್ತಾ ಇರೋ six packs ಜೊತೆಗೆ ಒಂದು, ದೊಡ್ಡ ಗುಡಾಣ ವನ್ನು, ಎಲ್ಲಾರಿಗೂ ಪ್ರದರ್ಶನ ಮಾಡ್ತಾ , ಮನೆ ಎದ್ರಿಗೆ ಇರೋ ರೋಡಿಗು ಹೋಗ್ತಾರೆ. ಹಾಗಾಗಿ ಆ ಕಡೆ ಈ ಕಡೆಯವರೆಲ್ಲ ಏನ್ ತಿಳ್ಕೊಂಡಿದಾರಂದ್ರೆ , ಪಾಪ ಇವ್ರು ತುಂಬಾ ಬಡವರು, ಇವರಿಗೆ ಹಾಕ್ಕೊಳೋಕ್ಕೆ ಬಟ್ಟೆ ಕೂಡ ಇಲ್ಲ ಅಂತಾ ಅಂದ್ಕೊಂಡಿರ್ತಾರೆ. ಅಂತು ಇಲ್ಲಿ ಏರಿಯಾದಲ್ಲೆಲ್ಲ ತುಂಬಾ ಫೇಮಸ್ ನಮ್ ಕರಿ ಕುರಿ ಮರಿ.
ಇದು ನಮ್ಮ ಕೇರಳ curry . ಈತನಿಗ ನಾವೆಲ್ಲ ಪ್ರೀತಿಯಿಂದ , LTTE , ಕೇರಳ ಕರಿ, ಕೇರಳ ಕುಟ್ಟಿ, ಎಂದೆ ಮೊನೆ, ಇತ್ಯಾದಿ ಎಲ್ಲ ನಾಮಗಳಿಂದ ಸಂಬೋಧಿಸ್ತಾ ಇರ್ತೀವಿ. ಈತ ಪಕ್ಕ RSS background ಇರೋ comunist ಎಲ್ಲವನ್ನು ವಿರೋಧ ಮಾಡೋದು ಇವನ ಚಾಳಿ. ಇವ್ನು ಮಾತಾಡ್ತಾ ಇದ್ರೆ, ನಮಗೆ ಒಂಥರಾ ಅದು ಒಂದು entertainment ಯಾಕೆ ಅಂದ್ರೆ, ಅವ್ನು ಮಾತುಗಳು ಕೇಳಲಿಕ್ಕೆ ಚೆನ್ನಾಗಿರುತ್ತೆ. ಉದಾಹರಣೆಗೆ, " ಐ ಡೋಲ್ಡ್ ಯು , ನಾಡ ಡು ಬುಡ್ ಮಜ್ ಜಿಲ್ಲಿ " ಯಾಕೆ ಏನು ಅಂತಾ ಗೊತ್ತಾಗ್ಲಿಲ್ವಾ, ಅವನ್ ಹೇಳ್ತಾ ಇದ್ದಾನೆ " I told you not to put much chilly " ಗೊತ್ತಾಯ್ತಲ್ಲ, ಯಾಕೆ ಅವ್ನ ಮಾತು ನಮಗೆ entertainement ಅಂತಾ. ಒಂದ್ಸಲ ಅವ್ನ ಹೇಳ್ದಾ, " ಐ ವಾಂಡ್ ಡು ಹ್ಯಾವ್ ಬಾದ್ ಇನ್ ಸುಗುಣ ಲೆಗ್ " ಇಲ್ಲಿ ಸುಗುಣ ಅಂದ್ರೆ ನಮ್ ಪಕ್ಕದ್ಮನೆಯವ್ಳು, ನಮಗೆಲ್ಲ ತಲೆ ಬಿಸಿ ಆಯ್ತು, ಇವ್ನೆನಪ್ಪ , ಸುಗುಣಳ ಲೆಗ್ ಬಗ್ಗೆ ಏನೋ ಹೇಳ್ತಾ ಇದ್ದಾನೆ ಅಂತ. ಆಮೇಲೆ ,ಗೊತ್ತಾಯ್ತು, ಅವ್ನು ಹೇಳಿದ್ದು, I want to have bath in sukhna lake . ಅಬ್ಬ ನಾವೆಲ್ಲ, ಸುಸ್ತು ಹೊಡ್ದು ಹೋಗಿ ಬಿಟ್ಟಿದ್ವಿ. ನಮ್ಮ ಅದರಷ್ಟ ಚೆನ್ನಾಗಿತ್ತು, ಅವ್ನು ಇದನ್ನೇ ಹೋಗೆ ಆ ಸುಗುಣಳ ಹತ್ರ ಹೇಳಲಿಲ್ಲ. ಇವ್ನು ಒಂಥರಾ ಮೂಡಿ, ಮೂಡ್ ಬಂತು ಅಂದ್ಬಿಟ್ರೆ ಭಾಳ ಕಷ್ಟಾ. ನಾವೆಲ್ಲಾ ಹೆದರಿ ಬಿಡ್ತಿವಿ. ಇದ್ದಕ್ಕಿದ್ದಂತೆ, ಒಂದಿವ್ಸಾ, ಬಂದವನೇ, " ಡುಡೇ ಐ ವಿಲ್ ಮೆಗ್ ದಿ ಬುಡ್ " ಅಂತಾ ಹೇಳ್ದ, ನಮಗೆಲ್ಲ ಐದ ನಿಮ್ಷಾ ಬೇಕಾಯ್ತು, ಅವ್ನು ಏನ್ ಹೇಳ್ತಾ ಇದ್ದಾನೆ ಅಂತ ತಿಳ್ಕೊಳ್ಳೋಕೆ. ನಂತರ ಗೊತ್ತಾಯ್ತು, ಇವತ್ತಿನ ಅಡ್ಗೆ ನಾನು ಮಾಡ್ತೀನಿ ಅಂತ. ನಮ್ದೆಲ್ಲ ಒಂದ್ ಸಿಸ್ಟಂ ಇದೆ, ಅದು ಅಂದ್ರೆ, ಒಬ್ರು ಅಡ್ಗೆ ಮಾಡ್ಬೇಕಾದ್ರೆ, ಬೇರೆ ಯಾರು ಅವ್ರ ಕೆಲಸದಲ್ಲಿ, ಕೈ ಹಾಕೋದಿಲ್ಲ, ಅವರಾಗೆ ಕೇಳಿದ್ರೆ ಮಾತ್ರ ಹೆಲ್ಪ್ ಮಾಡ್ತಾರೆ. ಹಾಗಾಗಿ,
ನಾವೆಲ್ಲಾ ಅವ್ನು ಅಡ್ಗೆ ಮನೆ ಒಳಗೆ ಅಡ್ಗೆ ಮಾಡ್ಬೇಕಾದ್ರೆ, ನಾವೆಲ್ಲಾ ಎಣ್ಣೆ ಹೋದೀತ, ಕಾರ್ಡ್ಸ್ ಆಡ್ತಾ , ಹೊರಗಡೆ ರೂಮಲ್ಲಿ, ಕೂತಿದ್ವಿ. ಸುಮಾರ್ ಹೊತ್ತಾದ್ರೂ, ಇವನ ಅಡ್ಗೆ ಬಗ್ಗೆ ಏನು ಸುದ್ದಿ ಇಲ್ಲ, ಆಮೇಲೆ, ಸುಮಾರ್ ಹೊತ್ತಾದ್ ಮೇಲೆ , ವಾಯ್ಸ್ ಬಂತು, " ದಿ ಬುಡ್ ಈಜ ರೆಡಿ " , ನಾವೆಲ್ಲಾ ಕುಡ್ಲೆ ಅಡ್ಗೆ ಮನೆಗೆ ಹೋಗಿ ನೋಡಿದ್ರೆ, ಏನ್ ಹೇಳೋದು, ನಮಗೆ ಒಂದ್ ವಾರಕ್ಕಾಗೊಸ್ಟು ಅಡ್ಗೆ ಮಾಡ ಇಟ್ಟ ಬಿಟ್ಟಿದ್ದಾನೆ. ಆ ಥರ ಮೂಡ್ ಅವನದು. ಇವನಿಗೆ ಖಾರ ಅಂದ್ರೆ ಭಾಳ ಇಷ್ಟಾ. ಅವನ್ ಅಡ್ಗೆ ಮಾಡಿದ ಮಾರನೆ ದಿವ್ಸಾ ನಮ್ಮ toilet ಖಾಲಿ ಸಿಗೋದೆ ಇಲ್ಲ , ಎಲ್ಲಾರು, ಹೊಟ್ಟೆ ಹಿಡ್ಕೊಂಡು, ಘಂಟೆಗೊಂದ್ಸಲ toilet ಕಡೆ ಓದ್ತಾ ಇರ್ತಾರೆ. ಅದಕ್ಕೋಸ್ಕರ, ಈಗ ನಾವ್ ಒಂದು agreement ಮಡ್ಕೊಂಡಿದೀವಿ, ಅದು ಅಂದ್ರೆ, ಈತ ಅಡ್ಗೆ, ಕೇವಲ, ಬ್ಯಾಂಕಿಗೆ ರಜಾ ಇರೋ ಹಿಂದಿನ ದಿವ್ಸಾ ಮಾತ್ರ ಮಾಡ್ಬೇಕು ಅಂತ.ಅದೇ ರೀತಿ ಮೆಣಸು ತರ್ಲಿಕ್ಕು ಕೂಡ ಒಂದ್ ಬಜೆಟ್ ಹಾಕಿ ಬಿಟ್ಟಿದೀವಿ, ತಿಂಗಳಿಗೆ ಇದಕ್ಕಿಂತ ಹೆಚ್ಹು ಮೆಣಸಿನಕಾಯಿ ತರಬಾರದು ಅಂತ. ಇವ್ನು ಪಾತ್ರೆ ತೊಳೆದರೆ ಅಂತು, ನಾವೆಲ್ಲಾ ಘಾಬರಿ ಆಗಿ ಬಿಡ್ತೀವಿ. ಎಸ್ಟ್ ಬೇಕಾದ್ರೂ ಪಾತ್ರೆ ಇರ್ಲಿ, ಇವ್ನು, ಕೇವಲ ಎರಡು ನಿಮಿಷದಲ್ಲಿ ಅದನ್ನೆಲ್ಲ ತೊಳ್ದು ಹಾಕಿ ಬಿಡ್ತಾನೆ. ನಮಗೆಲ್ಲ ಆಶ್ಚರ್ಯಾ. ಆದ್ರೆ ಒಳಗೆ ಹೋಗಿ ನೋಡಿದ್ಮೇಲೆ ಗೊತ್ತಾಯ್ತು, ಆದ ಹ್ಯಾಗೆ ಇವ್ನು ಅಷ್ಟು ಬೇಗ ಮಾಡ್ತಾನೆ ಅಂತ. ನಲ್ಲಿ ಕೆಳಗೆ ಪತ್ರೆ ಸುಮ್ನೆ ಒಂದ್ಸಲ ಹಿಡ್ಕೊಂಡ್ಬಿಡ್ತಾನೆ, ಮುಗಿತು, ಅದಕ್ಕೆ ಒಂದ್ಚುರು ನಿರು ತಾಗಿ ಬಿಟ್ರೆ ಸಾಕು, ಪಾತ್ರೆ ತೆಗದು ತೋಳ್ದಿರೋ ಕಡೆ ಇಟ್ಟ ಬಿಡ್ತಾನೆ. ಅಣ್ಣ ಮುಸರೆ, ಯಾವ್ದು ಹೊಗಿರಲ್ಲ, ಹಾಗಾರಿ, ಅವ್ನು ಮೂಡ್ ಬಂದು " ನಾನ್ ಇವತ್ತು ಪಾತ್ರೆ ತೋಳಿತೀನಿ" ಅಂತಾ ಹೇಳದಾಗೆಲ್ಲ ನಮಗೆಲ್ಲರಿಗೂ ತಲೆ ಬಿಸಿ , ಯಾಕೆ ಅಂದ್ರೆ , ಅವ್ನು ತೊಳ್ದು ಇತ್ತ ಮೇಲೆ, ನಾವ್ ಅದನ್ನ ಮತ್ತೆ ಪೂರ್ತಿ ತೊಳಿ ಬೇಕು.
ಇವ್ನು ಒಳ್ಳೆ ಆರ್ಟಿಸ್ಟ್ ಕೂಡ. ಏನೆ ವಸ್ತು ಕೊಟ್ರು ಕೂಡ ಅದರಿಂದ ಏನೋ ಒಂದು ಆಕರ್ಷಣೀಯ ಚಿತ್ತಾರವನ್ನ ಮಾಡಿ ಬಿಡ್ತಾನೆ.
ಮೇಲ ತೋರ್ಸಿರೋದೆಲ್ಲ ಅವನದೇ ಆರ್ಟೂ. ನಿಮ್ಮನ್ ನೋಡ್ತಾ ನೋಡ್ತಾ ನಿಮ್ ಚಿತ್ರಾ ಬಿಡ್ಸಿ ಬಿಡ್ತಾನೆ. ನಮ್ಮ ಎಣ್ಣೆ ಬಾಟಲ ಮೇಲೆ ಏನೋ ಒಂದು ಡಿಸೈನ್ ಮಾಡಿ ಬಿಡ್ತಾನೆ. ಎಣ್ಣೆ ಬಟ್ಲ ಕವರನ್ನ ಪೆನ್ ಸ್ಟ್ಯಾಂಡ್ ಮಾಡಿ ಬಿಡ್ತಾನೆ. ತರಕಾರಿ ಹೆಚ ಬೇಕಾದ್ರೆ, ಕಟ್ ಮಾಡಿದ ತರ್ಕಾರಿಯಿಂದಾನೆ ದೇಶದ ಧ್ವಜ ಮಾಡಿ ಬಿಡ್ತಾನೆ, ಹೀಗೆ ಹಲವಾರು. ಬಹಳ ಪ್ರತಿಭಾವಂತ. ಆದ್ರೆ, ಪಕ್ಕ ಕೆರಳಿಯನ್. ಬೇಗ ಕೆರಳಿ ಬಿಡ್ತಾನೆ.
ಅವ್ನು ಮಾಡೋ ಕೇರಳದ ಪುಟ್ಟು ಮತ್ತು ಕಡಲ ಕರಿ ನಮಗೆಲ್ಲ ತುಂಬಾ ಇಷ್ಟಾ, ಕೇವಲ ಅವನ ಮೆಣಸಿನ ಕಾಯಿ ಮಾತ್ರ ನಮಗೆ ಇಷ್ಟಾ ಆಗೋದಿಲ್ಲ.
ಓ ಇವರ್ಯಾರು ಅಂತ ಕೇಳಿದ್ರಾ, ಇವ್ರು ನಮ್ಮ ಟೀಮಿನ ಕಾಯ್ ತುರಿಯೋ ಮಾಸ್ತರು. ಕಾಯಿ ತುರಿಯೋದು ಹಾಗು ರಾತ್ರಿ ಪಾತ್ರೆ ತೊಳೆಯೋದು ಇವರ ಹಣೆ ಭರ. ಹಾಗು, ಬೆಳಿಗ್ಗೆ ಬೇಗ್ ಎದ್ದು ಎಲ್ಲಾರಿಗೂ ಚಾ ಮಾಡೋದ್ ಕೂಡ ಇವರ ಕೆಲಸ. ದೇವರ ದಯದಿಂದ ಇವರಿಗೆ ಅಡ್ಗೆ ಮಾಡೋದ್ ಬರಲ್ಲ, ಹಾಗಾಗಿ ನಾವೆಲ್ಲಾ ಒಂದ್ experiment ನಿಂದ ಬಚಾವ್ ಆಗಿ ಬಿಟ್ವಿ. ಇವ್ರು ಒಂಥರಾ ನಮ್ಮ ಟೀಮಿನ ಧರ್ಮರಾಯ ಇದ್ದಂಗೆ, ದೊಡ್ಡವರು, ಶಾಂತ ಮನಸಿನವರು, ಬಹಳ ನ್ಯಾಯ ಶಿಸ್ತು ಪಾಲಿಸಿ ಕೊಂಡು ಬಂದವರು. ಯಾವತ್ತು ಯಾರಿಗೂ ನೋವುಂಟು ಮಾಡೋವ್ರು ಅಲ್ಲ ಇವ್ರು. ಯಾರು ಏನ್ ಅಡ್ಗೆ ಮಾಡಿ ಹಾಕಿದರು, ಅದರೊಳಗೆ ಎಷ್ಟು ಬೇಕಾದ್ರೂ, ಖಾರ, ಹುಳಿ ಇರ್ಲಿ, ಅದು ಎಸ್ಟ್ ಬೇಕಾದ್ರೂ ಕೆಟ್ಟದಾಗಿರಲಿ, ಅವ್ರಿಗೆ ಕೇಳಿದ್ರೆ ಒಂದೇ ಉತ್ರ, " ಭಾಳ ಚೆನ್ನಾಗಿದೆ ". ಯಾರ್ ಮನಸನ್ನು ನೋಯ್ಸೋದಿಲ್ಲ. ದೈವ ಭಕ್ತರು, ದಿನಾ ಬೆಳಿಗ್ಗೆ ಸಂಜೆ ಎರಡು ಹೊತ್ತು ದೇವರಿಗೆ ಪೂಜೆ ಮಾಡ್ತಾರೆ. ಪ್ರತಿ ಭಾನ್ವಾರ ಸಂಜೆ ದೇವಸ್ಥಾನಕ್ಕೆ ಹೋಗಲೇ ಬೇಕು. ಪ್ರತಿ ದಿನ ಬೆಳಿಗ್ಗೆ ದೇವರ ನಾಮ ಸ್ಮರಣೆ, ಮತ್ತು ರಾಮ ನಮ ಜಪ ಆಗ್ಲೇ ಬೇಕು. ಇವ್ರು ಒಂಥರಾ, ಕಟ್ಟು ನಿಟ್ಟಿನ ಮನುಷ್ಯ. ಸಮಯಕ್ಕೆ ಸರಿಯಾಗೇ ಎದ್ದು ಬಿಡ್ತಾರೆ, ಚಾ ಮಾಡಿ ತಾವು ಕುಡ್ದು, ಕುಡ್ಲೆ, ಸ್ನಾನ ಮಾಡ್ಲಿಕ್ಕೆ ಹೋಗಿ ಬಿಡ್ತಾರೆ. ಯಾರ್ ರೆಡಿ ಆಗ್ಲಿ ಬಿಡ್ಲಿ, ಅವ್ರು ಮಾತ್ರ, ಬೆಳಿಗ್ಗೆ ಎಂಟು ಘಂಟೆಗೆ ಆಫಿಸ್ ಹೋಗಲಿಕ್ಕೆ ತಯಾರಾಗಿ ಬಿಡ್ತಾರೆ. ಮಳೆ ಇರ್ಲಿ, ಬಿಸ್ಲು ಇರ್ಲಿ, ಚಳಿ ಇರ್ಲಿ, ಇವ್ರನ್ ಮಾತ್ರಾ ಹೆದ್ರಿಸ್ಲಿಕ್ಕೆ ಅಥವಾ ಇವರ ಮನಸನ್ ಬದಲಾಯಿಸ್ಲ್ಕ್ಕೆ ಸಾಧ್ಯಾ ಆಗ್ಲಿಲ್ಲ.
ಇವರು ಕರೆಕ್ಟ್ ಆಗಿ ಎಂಟು ಘಂಟೆ ಮೂವತ್ತು ನಿಮಿಷಕ್ಕೆ ಮನೆ ಬಿಟ್ಟು ಬಿಡ್ತಾರೆ. ಯಾರ್ ಬರಲಿ ಬಿಡ್ಲಿ, ಇವ್ರು ಯಾರಿಗೂ ಕಾಯೋದಿಲ್ಲ , ಸೀದಾ ಹೊರಟ್ ಬಿಡ್ತಾರೆ. ರಾತ್ರಿ ಕೂಡ ಅಸ್ಟೆ, ಎಲ್ಲರ ಊಟ ಮುಗಿದ್ತಕ್ಷಣ ಎಲ್ಲ ಟೇಬಲ್ ಕ್ಲೀನ್ ಮಾಡಿ, ಪಾತ್ರೆ ಎಲ್ಲ ತೊಳ್ದು, ವರ್ಸಿ, ಅದ್ರ ಜಾಗದಲ್ಲಿ ಇತ್ತು, ಅಡ್ಗೆ ಮನೆ ಎಲ್ಲ ಕ್ಲೀನ್ ಮಡಿ, ತಮ್ಮಷ್ಟಕ್ಕೆ ತಾವು ಹೋಗಿ ಮಲ್ಕೊಂಡ್ ಬಿಡ್ತಾರೆ, ಬೇರೆಯವರು ಮಾತಾಡ್ತಾ ಕೂತಿದ್ರು ಕೂಡ, ಇವ್ರು ತಮ್ಮ ಪಾಡಿಗೆ ತಾವು ಹೋಗಿ ಮಲ್ಕೊಂದ್ಬಿಡ್ತಾರೆ. ಬಹಳ ಸಿಸ್ಟಮಾಟಿಕ್ ವ್ಯಕ್ತಿ. ಇವ್ರು ಕೂಡ ಬಾಕಿ ಎಲ್ಲ ವಿಷಯದಲ್ಲೂ, ಕೂಡ, ಡಿಫರೆಂಟ್ ಆದರು, ಕೂಡ ಎಣ್ಣೆ ಹೋಡಿಯೋದ್ರಲ್ಲಿ, ಎಲ್ಲರ ಜೊತೆ ಒಂದು.
ನಮ್ಮಲ್ಲಿ ವಾಶಿಂಗ್ ಮಷಿನ್ ಇದ್ರೂ ಕೂಡ ಇವ್ರು ಬಟ್ಟೆನ ಕಯಲ್ಲೇ ಒಗೆಯೋದು. ಆ ಬಟ್ಟೆಗಳ ಮೇಲೆ ಇವರಿಗೆ ಬಹಳ ಸಿಟ್ಟು ಇರ್ಬೇಕು, ಯಾಕೆ ಅಂದ್ರೆ, ಅದನ್ನ, ಬ್ರಶಿನಿಂದ ಹಾಕಿ ಹಾಕಿ ಜೋರ್ ಜೋರಾಗಿ ಉಜ್ಜತಾ ಇರ್ತಾರೆ. ಆ ಬಟ್ಟೆಗೆನಾದ್ರು ಬಾಯಿ ಇದ್ದಿದ್ರೆ, ಇವರಿಗೆ ಅದು ಬಯಿಗ್ ಬಂದಂತೆ ಬಯ್ತಾ ಇತ್ತೇನೋ, ಅಷ್ಟೊಂದು ಹಾಕಿ ಉಜ್ತಾರೆ. ಇವ್ರು ಪೇಪರ್ ಓದೋದು ಕೂಡ ರಾತ್ರಿ, ಎಲ್ಲ ಕೆಲಸ ಮುಗ್ದ ಮೇಲೆ.
ಇದು ನಮ್ಮ ಮೂರೂ ಜನ ಸಹಯೋಗಿಗಳ ಬಗ್ಗೆ ತಿಳಿಸಿದೆ , ಇನ್ನು ನನ್ನ ಬಗ್ಗೆ ತಿಳಿಸದೆ ಇದ್ರೆ ಸರಿ ಹೋಗಲ್ಲ, ಹಾಗಾಗಿ ನನ್ನ ಬಗ್ಗೆ ಕೂಡ ಸ್ವಲ್ಪ ಹೇಳ್ತೀನಿ.
ನನ್ ಬಗ್ಗೆ ಹೇಳ್ಬೇಕು ಅಂದ್ರೆ, ತುಂಬಾ ಒಳ್ಳೆಯವನು, ಯಾವದೇ ಕೆಟ್ಟ ಅಭ್ಯಾಸ ಇಲ್ಲ, ತುಂಬಾ ಪಾಪ್ದವನು, ಯಾರಿಗೂ ಬಯ್ಯೋದಿಲ್ಲ, ಯಾರಿಗೂ ಜೋರ್ಮಾಡೋದಿಲ್ಲ , ಎಲ್ಲಾರಿಗೂ ಹೆದರ್ಕೊಂಡು , ಎಲ್ಲಾರು ಹೇಳ್ದಂಗೆ ಕೇಳ್ಕೊಂಡು ಇರ್ತಾನೆ.
ಏನಿದು ತನ್ ಬಗ್ಗೆ ಭಾಳ ಒಳ್ಳೇದ್ ಹೇಳ್ಕೊಳ್ತಾ ಇದ್ದಾನಲ್ಲ, ಅಂತ ಅಂದ್ಕೊಳ್ತಾ ಇದ್ದೀರಾ. ನಾನು ಎಲ್ಲಾ ಉಲ್ಟಾ ಹೇಳ್ದೆ ಅಷ್ಟೇ, ಎಲ್ಲ ವಿಷಯಗಳಲ್ಲು, ಮೇಲೆ ಹೇಳಿರೋ ಬಗ್ಗೆ ಉಲ್ಟಾ ತಿಳ್ಕೊಳ್ಳಿ, ಅದೇ ನಾನು. ನಾನು ಅಡ್ಗೆ ಮಾಡಿದ್ರೆ, ಯಾರು ಕೂಡ ಚೆನ್ನಾಗಿ ಇಲ್ಲ ಅಂತಾ ಹೇಳೋ ಹಾಗೆ ಇಲ್ಲ, ಆ ಹಕ್ಕನ್ನ ಅವ್ರಿಗೆ ನಾನು ಕೊಟ್ಟೆ ಇಲ್ಲ. ನಾನು ಇಲ್ಲಿ ಎರಡು ಸೂರ್ಯ ಇದೆ ಅಂದ್ರೆ, ಎಲ್ಲಾರು ಕೂಡ ಹೌದು ಅಂತಾರೆ. ಆದ್ರೆ ಮನಸೊಳಗೆ ಏನ್ ಅಂದ್ಕೊಳ್ತಾರೋ ಅದು ನಂಗೆ ಗೊತ್ತಿಲ್ಲ, ಕನಿಷ್ಠ ಎದ್ರಿಗೆ ಮಾತ್ರ ಹೇಳೋದಿಲ್ಲ.
ನಾನ್ ಒಂಥರಾ ಹಿಟ್ಲರ್ ಇದ್ದಹಾಗೆ ಅಥ್ವಾ, ಅವ್ನ ವಂಶದ ಕೊನೆ ಕುಡಿ ಇದ್ದಹಾಗೆ. ಎಲ್ಲ ನಾನ್ ಹೇಳ್ದಾಗೆ ಆಗ್ಬೇಕು. ನಾನ್ ಹೇಳಿದ್ದಕ್ಕೆ ಎಲ್ಲರೂ ಬಹು ಪರಾಕ್ ಎನ್ನ ಬೇಕು.
ಒಂಥರಾ ನಾನು ನಾಜ್ಹಿ ವಂಶದವನು. ಆದ್ರೆ ಪಕ್ಕ ಹಿಂದೂ , ಯಾರಾದ್ರು, ಹಿಂದೂ ಗಳ ಬಗ್ಗೆ, ಅಥವಾ, ದೇಶದ ಬಗ್ಗೆ ಏನಾದ್ರು, ಅವಹೇಳನದ ಮಾತು ಹೇಳಿ ಬಿಟ್ರೆ ಮುಗಿತು, ಅವತ್ತು ಅವ್ನು ನಿದ್ದೆ ಮಾಡೋದಿಲ್ಲ, ಯಾಕಾದ್ರೂ, ಈತನ ಜೊತೆ ಬಂದ್ ಸೇರ್ಕೊಂಡ್ನೋ , ಅಂತ ಪಶ್ಚಾತ್ತಾಪ ಪಡ್ಕೋಬೇಕು, ಹಂಗ ಮಾಡಿಬಿಡ್ತೀನಿ.
ಹಾಗಾಗಿ ನನ್ ಎದ್ರಿಗೆ ಯಾರು BJP , RSS , Vishwa Hindu Parishat , ಇತ್ಯಾದಿಗಳ ಬಗ್ಗೆ ನಿಂದನೆ ಮಾಡೋದಿಲ್ಲ. ನಾನು ಏಳೋದು ಬಹಳ ಬೇಗ, ಎಲ್ಲರೂ ಎದ್ದು, ರೆಡಿ ಆದ ಮೇಲೆ. ಎಣ್ಣೆ ವಿಷಯದಲ್ಲಿ, ನಾನು ನಮ್ಮ ಟೀಮಿನ ಜೊತೆಗೆ. ಆ ವಿಷಯದಲ್ಲಿ ನಮ್ಮಲ್ಲಿ ಯಾವೊತ್ತು ಜಗಳ ಆಗೋದೇ ಇಲ್ಲ.
ನಾನು ಅಡ್ಗೆ ಮಾಡೋದು, ಫೋನ್ ಇನ್ ಕಾರ್ಯಕ್ರಮದ ಮುಖಾಂತರ. ನಮ್ ಮನೆಯೋವ್ರು, ನಮ್ ಯಜಮಾನರು, ಫೋನ್ ಮುಖಾಂತರ, ನಂಗೆ ಅಡ್ಗೆ ಮಾಡೋದ್ ಹೇಳ್ಕೊಡ್ತಾ ಇರ್ತಾರೆ, ನಾನು ಅದೇ ಪ್ರಕಾರ ಮಾಡ್ತಾ ಹೋಗ್ತೀನಿ. ಹಾಗಾಗಿ, ನಾನು ಅಡಿಗೆ ಮಾಡ್ದಾಗ ಚೆನ್ನಗಾದ್ರೆ, ನಂಗೆ ಶಭಾಷ್ಗಿರಿ, ಕೆಟ್ಟದಾದ್ರೆ ಅದು ನಮ್ಮ ಮನೆಯವರ ರೆಸಿಪಿ ಅಂತ ಹೇಳಿ ತಪ್ಪಿಸ್ಕೊಳೋದು . ನಂಗೆ ಹುಣಸೆ ಹಣ್ಣು ಅಂದ್ರೆ ತುಂಬಾ ಇಷ್ಟ, ನಾನು ನನ್ನ ಎಲ್ಲ ನಳ ಪಾಕಕ್ಕು ಕೂಡ , ಹುಣಸೆ ಹಣ್ಣು ಹಾಕೆ ಹಾಕ್ತೀನಿ. ನಾನ್ ಒಂಥರಾ, ಹುಳಿ ಮನುಷ್ಯ.
ಇದು ನಮ್ಮ three idiots + one ಟೀಮ್.
3 idiots + 1
ಅವ್ರು ತರಕಾರಿ ಹೆಚ್ಹೊದುನ್ ನೋಡೋದೇ ಒಂದು ಚೆಂದ.ಕಚ ಕಚನೆ ಕೊಚ್ಚಿ ಹಾಕಿ ಬಿಡ್ತಾರೆ. ಒಳ್ಳೆ expert . ಅವ್ರು ಲುಂಗಿ ಮೇಲೆತ್ತಿ, ತಮ್ಮ ಮಸಲ್ ನಿಂದ ತುಂಬಿದ ಆ ಕಾಲು ಗಳನ್ನೂ ತೋರಿಸ್ತಾ, ಅಡ್ಗೆ ಮಾಡೋದ್ ನೋಡೋದೇ ಒಂದು ಚೆಂದ. ಅವ್ರು ಒಂಥರಾ ಹಳ್ಳಿಯವರು ಅಡ್ಗೆ ಮಾಡ್ದಾಗೆ, ಉಪ್ಪು ಕಡಮೆ ಹಾಕ್ತಾರೆ, ಯಾಕೆ ಅಂತ ಗೊತ್ತಾಗಿರಬೇಕಲ್ಲ, ಅಷ್ಟೊಂದ್ ಬೆವರು ಬರ್ತಾ ಇರುತ್ತೆ.
ಅಲ್ಲಿಂದ ಎಲ್ಲಾರು ಬ್ಯಾಂಕಿಗೆ ಹೋಗಿ ಬಿಟ್ರೆ, ಮತ್ತೆ ವಾಪಾಸ್ ಬರೋದು ರಾತ್ರಿ, ಎಂಟರ ನಂತರ. ಮನೆಗ್ ಬಂದಾಗ ಎಲ್ಲರಿಗೂ ಸುಸ್ತು ಆಗಿ ಬಿಟ್ಟಿರುತ್ತೆ. ಹಾಗಾಗಿ, ಈಗ ಅಡ್ಗೆ ಮಾಡ್ಲಿಕ್ಕೆ ಯಾರಿಗೂ ತಾಕತ್ ಇರೋದಿಲ್ಲ. ಒಬ್ರ ಮುಖ ಒಬ್ರು ನೋಡೋದು, ಕಣ್ಣಲ್ಲೇ ಹೇಳೋದು, ನೀನು ಮಾಡು, ನೀನು ಮಾಡು ಅಂತ, ಕೊನೆಗೆ ಯಾರೋ ಒಬ್ಬ ರೆಡಿ ಆಗಿಬಿಡ್ತಾನೆ. ಅಲ್ಲೂ, ಕೂಡ ನಮ್ಮ ಕರಿ ಕುರಿ ಮರಿ, ಬೇಗ್ ರೆಡಿ ಆಗಿಬಿಡ್ತಾನೆ, ಯಾಕೆ ಅಂದ್ರೆ, ಅವ್ರಿಗೆ, ಹುಣಸೆ ಹಣ್ಣಿನ ಹೆದರಿಕೆ. ಇಲ್ಲೂ ಕೂಡ, ರಾತ್ರಿ, ಅಡ್ಗೆ ಮಾಡೋದಕ್ಕೆ ನಂಗೆ ಫಸ್ಟ್ preference , ಯಾಕೆ ಅಂದ್ರೆ, ನಾನು ಹಿಟ್ಲರ್ ಕುಡಿ, ನಾನು ಬೇಡ ಅಂದ್ರೆ ಮತ್ತೆ ಬೇರೆಯವರು.
ಒಟ್ಟಿಗೆ ರಾತ್ರಿ ಅಡಿಗೆ ಮುಗಿಯೋವಾಗ ರಾತ್ರಿ, ಸುಮಾರು ಹತ್ತು ಘಂಟೆ ಆಗುತ್ತೆ. ಅಡ್ಗೆ ಆಗೋ ತನಕ ಏನು ಮಾಡೋದು, ಆವಾಗ ಸುರು ಆಗುತ್ತೆ ನಮ್ಮ ಪ್ರತಿಜ್ಞೆಯ ಪಾಠ. ಸರಿ, ಇವತ್ತು ಲಾಸ್ಟ್, ಇನ್ಮುಂದೆ ಕುಡಿಬಾರ್ದು ಅಂತ, ಡಿಸೈಡ್ ಮಾಡಿ , ಎಣ್ಣೆ ಹೊಡೀಲಿಕ್ಕೆ ಸುರು ಮಾಡ್ತೀವಿ.
ಆಗ ಬೇರೆ ಬೇರೆ ಚರ್ಚೆ , ವಿವಿಧ ವಿನೋದ ಹಾವಳಿ, ಎಲ್ಲ ಆಗುತ್ತೆ. ಅಂತು ಇಂತೂ ಅದೆಲ್ಲ ಮುಗಿದ ಮೇಲೆ, ರಾತ್ರಿ, ಸುಮಾರು ಹನ್ನೊಂದು ಘಂಟೆ ಅಷ್ಟೊತ್ತಿಗೆ, ನಮ್ಮ ಊಟ , ಎಲ್ಲ ಮುಗಿದಮೇಲೆ, ನಮ್ಮ ಕೊನೆಯ ಕಾರ್ಯ ಕ್ರಮ ಪ್ರಾರಂಭ ಆಗುತ್ತೆ.
ಎಲ್ಲಾರು ಕೂಡ ತಮ್ ತಮ್ ಮೊಬೈಲ್ ತೆಕೊಂಡು , ತಮ್ಮದೇ ಆದ ಕೆಲವು, ಫಿಕ್ಸ್ ಜಾಗ್ ಇದೆ, ಮನೆ ಹೊರಗೆ, ಗೇಟ್ ಹೊರಗೆ, ಮರದ ಕೆಳಗೆ, ಮಾಡಿನ್ ಮೇಲೆ, ಇತ್ಯಾದಿ, ಅಲ್ಲಿ, ಹೋಗಿ, ತಮ್ಮ, ತಮ್ಮ ಯಜಮಾನರಿಗೆ ಫೋನ್ ಮುಖಾಂತರ, ಅವತ್ತಿನ ಎಲ್ಲ ದೈನಂದಿನ ವರದಿಯನ್ನ ಒಪ್ಪಿಸ್ತಾರೆ. ಆ ಕಡೆಯಿಂದ ಜೋರಾಗಿ ಕೇಳ್ಸುತ್ತೆ, " ಏನ್ರೀ ಇವತ್ತು, ಎಣ್ಣೆ ಹೊಡ್ಡಿದೀರ ಏನ್ ಕಥೆ " ಅಂತ, ಆಗ ಎಲ್ಲಾರ್ ಉತ್ರಾನು ಒಂದೇ, " ಇಲ್ಲ ಕಣೆ, ಬಾಕಿಯವ್ರೆಲ್ಲ ಎಣ್ಣೆ ಹೊಡ್ದ್ರು, ನಾನ್ ಮಾತ್ರ ಆಗಲ್ಲ, ಅಂದೇ, ಅವರಿಗೆಲ್ಲ, ಬುಧಿವಾದ ಕೂಡ ಹೇಳ್ದೆ, ಆದ್ರೆ, ಅವ್ರಿಗೆ ಬುಧಿ ಇಲ್ಲ ಅಂದ್ರೆ ನಾನ್ ಏನ್ ಮಾಡ್ಲಿಕ್ಕೆ ಆಗುತ್ತೆ. ನಾನ್ ಮಾತ್ರ ಎಣ್ಣೆ ಹೊಡಿಯೋದ್ ನಿಲ್ಸಿ ಸುಮಾರು ಎರಡು ತಿಂಗಳಿಗಿಂತ ಮೇಲಾಯ್ತು ಕಣೆ. ಯಾಕೋ ಯಾವಾಗಲು, ನಿಂದೆ ನೆನಪು, ನಿನ್ ನೆನಪು ಬಂದಾಗ , ಎಣ್ಣೆ ಏನ್ ಬಂತು, ಊಟ ತಿಂಡಿ ಕೂಡ ಸೇರಲ್ಲ ಕಣೆ, ( ಬಡ್ಡಿ ಮಗ, ಮಾಡಿದ ಅಡ್ಗೆ ಯಲ್ಲಿ ಅರ್ಧಾ ಹೊಡ್ಕೊಂಡ್ ಬಂದಿರ್ತಾನೆ ) .
ಯಾವಾಗ್ ಊರಿಗ್ ಬರ್ತೀನೋ ಅನಿಸ್ತಾ ಇದೆ ಕಣೆ, " ಇದು ನಮ್ಮೆಲ್ಲರ ಫಿಕ್ಸೆಡ್ ಡೈಲಾಗ್ ಗಳು. ದಿನ ನಿತ್ಯ ಹೊಡೆಯೋವಂತಾದು. ಅದಾದ್ ನಂತರ ನಾವೆಲ್ಲಾ ಕೂಡ, ನಮ್ ನಮ್ ಬೆಡ್ ಕಡೆ ಹೋಗ್ತೀವಿ, ಅವಾಗ್ ಮಾತ್ರ, ದೇವ್ರಾಣೆ ಗ್ಲು ಯಾರಿಗೂ ಕೂಡ ಹೆಂಡ್ತಿ ಜ್ಞಾಪಕ ಬರ್ತಾ ಇರಲ್ಲ, ಅದ್ರ ಬದಲಿಗೆ, ಪಕ್ಕದ್ ಮನೆ ರಾಣಿನೋ, ಸುಗುಣಾನೋ, ಜ್ಞಾಪಕಾ ಬರ್ತಾ ಇರ್ತಾಳೆ.
ಓ ಕೆ , ಶುಭ ರಾತ್ರಿ, ಸ್ವೀಟ್ ಡ್ರೀಮ್ಸ್ , ಕಂಸಲ್ಲಾದ್ರು, ಮನಸನ್ನು ಸರಿ ಮಾಡ್ಕೊಂಡು ಎಂಜಾಯ್ ಮಾಡಿ.

































+







This comment has been removed by the author.
ReplyDeleteನಾಲ್ಕು ಜನ ಖ ಖ ಖ ಖ /3 +1 idiots ಲೇಖನ ಓದಿ ನಾನಂತೂ ಹೊಟ್ಟೆ ತುಂಬಾ ನಕ್ಕು ಬಿಟ್ಟೆ. ಖ ಖ ಖ ಖ ಗಳ ದಿನಚರಿ ಅದ್ಭುತವಾಗಿ ವಿವರಿಸಿದ್ಹಿರಿ, ಪಾತ್ರ ಪರಿಚಯ ಓದುವಾಗ
ReplyDeleteಒಳ್ಳೆಯ ಮಜಾ ಕೊಡ್ತು. ನಾಲ್ಕು ವಿಬಿನ್ನ ಮನಸ್ಸುಗಳು, ಒಂದೇ ಸೂರಿನಲ್ಲಿ, ಹೊಂದಿ ಬಾಳುತ್ತಿರುವ ಗುಣ ಸತ್ಯವಾಗಿಯೂ ಮೇಚುವಂತದ್ದೆ.
ಮರಿ ಸ್ವಾಮಿಯವರ ಕಾಮಿಡಿಯನ್ ರೋಲ್, ಶಾನ್ ಭಾಗರವರ ಶಾಂತ ಸ್ವಭಾವ , ಸರಳ ಜೀವನ ಶ್ಯಲಿ, ಸಜೀವ ರವರ ಕೇರಳಿಯ ಅಡುಗೆಗಳು,ಮಂಗ್ಲೀಶ್ ಭಾಷೆ ಎಲ್ಲಕಿಂತ
ಮಿಗಿಲಾಗಿ ಅವರು ರಚಿಸಿದ ಆರ್ಟ್ ಗಳನ್ನೂ ನೋಡಿ ನಿಜಕ್ಕೂ ತುಂಬಾ ಕುಶಿಯಾಯ್ತು.ಇನ್ನು ತಮ್ಮ ಬಗ್ಗೆ ಸತ್ಯ ಪರಿಚಯ ಓದಿ, ನೀವೇ ಹೇಳಿರುವಹಾಗೆ "ಖಿ" ಆದೆ.
ಈ ಲೇಖನ ಓದಿ, ಕೊನೆಗೆ ಅನ್ನಿಸಿದ್ದು , ಅದಕ್ಕೆ ಇರಬೇಕು ನಮ್ಮ ದೇಶವನ್ನು "ಅನೇಕತಾ ಮೇ ಏಕತಾ" ಅಂತ ಹೇಳಿರುವುದು.
ಧನ್ಯವಾದಗಳು, ನನ್ನ ಪಿರೀತಿಯ ಖಿ ಖಿ ಖಿ ಹಾಗು ನನ್ನ ಫಿಫ್ಟಿ ಪರ್ಸೆಂಟ್ ಶರ್ಟು
ReplyDeleteನಿನ್ನ ಪಿರೀತಿಯ ಕೋಡಂಗಿ
ಚಂಡಿಯ ಗಂಡ